ಕಾಸರಗೋಡು: ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣಾ ಉಪವಿಭಾಗದ ಪೆರ್ಲ-ಸೂರಂಬೈಲ್ ರಸ್ತೆ ಡಾಂಬರೀಕರಣ ಕಾಮಗಾರಿ ಏ. 11ರಿಂದ ಆರಂಭಗೊಲ್ಳಲಿರುವ ಹಿನ್ನೆಲೆಯಲ್ಲಿ ಈ ಹಾದಿಯಾಗಿ ಮುಂದಿನ ಒಂದು ತಿಂಗಳ ಕಾಲ ಘನವಾಹನಗಳಿಗೆ(ಬಸ್, ಲಾರಿ, ಟ್ರಕ್ ಇತ್ಯಾದಿ) ಸಂಚಾರ ನಿಷೇಧಿಸಿ ಲೋಕೋಪಯೋಗಿ ಇಲಾಖೆ ಅದಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪೆರ್ಲದಿಂದ ಕನ್ನಟಿಕಾನ, ಗಾಳಿಗೋಪುರ, ಸ್ವರ್ಗ ಮೂಲಕ ಸೂರಂಬೈಲ್ ವರೆಗಿನ 5.8ಕಿ.ಮೀ ರಸ್ತೆಯನ್ನು ಡಾಂಬರೀಕರಣದ ಮೂಲಕ ಅಭಿವೃದ್ಧಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಸಕ್ತ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಾಟುಕುಕ್ಕೆ-ಖಂಡೇರಿ ಮೂಲಕ ಸ್ವರ್ಗ ರಸ್ತೆ ಇತರೆ ಬದಲಿ ರಸ್ತೆಗಳಲ್ಲಿ ಸಂಚರಿಸುವಂತೆ ಕಾಸರಗೋಡು ರಸ್ತೆ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
ಪೆರ್ಲ-ಸ್ವರ್ಗ-ಸೂರಂಬೈಲ್ ರಸ್ತೆಯ ಶೋಚನೀಯಾವಸ್ಥೆ ಬಗ್ಗೆ 'ವಿಜಯವಾಣಿ'ಹಲವು ವಿಶೇಷ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಹಾಗೂ ಮಂಜೇಶ್ವರ ಶಾಸಕರ ಗಮನ ಸೆಳೆದಿತ್ತು.





