ನವದೆಹಲಿ: 'ಜೈಲಿನಲ್ಲಿದ್ದುಕೊಂಡೇ ಸರ್ಕಾರವನ್ನು ಮುನ್ನಡೆಸಲು ಬಯಸುತ್ತಾರೆ ಎಂಬ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಲು ಆಗುವುದಿಲ್ಲ' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಇಲ್ಲಿನ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ.
0
samarasasudhi
ಏಪ್ರಿಲ್ 06, 2024
ನವದೆಹಲಿ: 'ಜೈಲಿನಲ್ಲಿದ್ದುಕೊಂಡೇ ಸರ್ಕಾರವನ್ನು ಮುನ್ನಡೆಸಲು ಬಯಸುತ್ತಾರೆ ಎಂಬ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಲು ಆಗುವುದಿಲ್ಲ' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಇಲ್ಲಿನ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ.
ತನ್ನ ವಕೀಲರೊಂದಿಗೆ ಸಮಾಲೋಚನೆ ನಡೆಸುವುದಕ್ಕಾಗಿ ಹೆಚ್ಚು ಸಮಯ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಜಾರಿ ನಿರ್ದೇಶನಾಲಯ ಈ ವಾದ ಮಂಡಿಸಿತು. ಅಲ್ಲದೇ, ಹೆಚ್ಚು ಸಮಯ ನೀಡುವಂತೆ ಕೊರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಗೆ ವಿರೋಧ ವ್ಯಕ್ತಪಡಿಸಿತು.
ಸಿಬಿಐ ಮತ್ತು ಇ.ಡಿ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಅರ್ಜಿ ವಿಚಾರಣೆ ನಡೆಸಿ, ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.
ವಿಚಾರಣೆ ವೇಳೆ, ಕೇಜ್ರಿವಾಲ್ ಪರ ಹಾಜರಿದ್ದ ವಕೀಲ, 'ನನ್ನ ಕಕ್ಷಿದಾರ ವಿರುದ್ಧ ಹಲವು ಪ್ರಕರಣಗಳಿವೆ. ಯಾವುದೇ ವ್ಯಕ್ತಿಗೆ, ಈ ಪ್ರಕರಣಗಳನ್ನು ಅರ್ಥ ಮಾಡಿಕೊಂಡು, ಸೂಚನೆಗಳನ್ನು ನೀಡಲು ವಾರಕ್ಕೆ ಒಂದು ಗಂಟೆ ಸಮಯ ಸಾಕಾಗುವುದಿಲ್ಲ. ವಾರಕ್ಕೆ 5-6 ಬಾರಿ ವಕೀಲರ ಭೇಟಿಗೆ ಅವಕಾಶ ನೀಡಬೇಕು' ಎಂದು ತಿಳಿಸಿದರು.
ಈ ಮನವಿಗೆ ವಿರೋಧ ವ್ಯಕ್ತಪಡಿಸಿದ ಇ.ಡಿ, ಇದು ಜೈಲು ಕೈಪಿಡಿಗೆ ವಿರುದ್ಧವಾದುದು ಎಂದು ಹೇಳಿತು.
'ಕಾನೂನು ಸಲಹೆ ಪಡೆಯುವುದಕ್ಕಾಗಿ ವಕೀಲರ ಭೇಟಿಯ ಸವಲತ್ತನ್ನು ಕೇಜ್ರಿವಾಲ್ ಅವರು ಸಮಾಲೋಚನೆ ಬದಲು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ' ಎಂದು ಇ.ಡಿ ಪರ ವಕೀಲರು ಆರೋಪಿಸಿದರು. ಇ.ಡಿ ವಾದವನ್ನು ಕೇಜ್ರಿವಾಲ್ ಪರ ವಕೀಲರು ವಿರೋಧಿಸಿದರು.