ನವದೆಹಲಿ: 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ಸ್ಮರಣೆಯ ಭಾಗವಾಗಿ ಹುತಾತ್ಮರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
0
samarasasudhi
ಏಪ್ರಿಲ್ 13, 2024
ನವದೆಹಲಿ: 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ಸ್ಮರಣೆಯ ಭಾಗವಾಗಿ ಹುತಾತ್ಮರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
'ಜಲಿಯನ್ ವಾಲಾಬಾಗ್‌ನಲ್ಲಿ ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಭಾವಪೂರ್ಣ ನಮನಗಳು!
'ದೇಶದಾದ್ಯಂತ ನನ್ನ ಕುಟುಂಬದ ಸದಸ್ಯರ ಪರವಾಗಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಲ್ಲ ವೀರ ಹುತಾತ್ಮರಿಗೆ ನನ್ನ ಗೌರವ ನಮನವನ್ನು ಸಲ್ಲಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
1919ರ ಏಪ್ರಿಲ್ 13ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ವಸಾಹತುಶಾಹಿ ಬ್ರಿಟಿಷರ 'ರೌಲತ್ ಕಾಯಿದೆ'ಯ ದೌರ್ಜನ್ಯದ ವಿರುದ್ಧ ಪ್ರತಿರೋಧ ದಾಖಲಿಸಲು ನೂರಾರು ಮಂದಿ ಸೇರಿದ್ದರು. ಶಾಂತಿಯುತವಾಗಿ ಸೇರಿದ್ದ ಜನಸ್ತೋಮದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಬ್ರಿಟಿಷ್ ಸೈನಿಕರು, ಸಾವಿರಾರು ಸ್ವಾತಂತ್ರ್ಯ ಸೇನಾನಿಗಳನ್ನು ಹತೈಗೈದಿತ್ತು.