ಕೋಝಿಕ್ಕೋಡ್: ಕಾರಂದೂರು ಮರ್ಕಝ್ ಸೆಂಟರ್ ಆಫ್ ಎಕ್ಸಲೆನ್ಸ್, ಪುನೂರು ಜಾಮಿಯಾ ಮದೀನತುನ್ನೂರಿನ ಹಳೆ ವಿದ್ಯಾರ್ಥಿ ಅಬ್ದುಲ್ ಫಝಲ್ ನೂರಾನಿ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರತಿಷ್ಠಿತ ಸಿವಿಲ್ ಸರ್ವೀಸಸ್-2024 ಪರೀಕ್ಷೆಯಲ್ಲಿ 507 ನೇ ರ‍್ಯಾಂಕ್ ಗಳಿಸಿದ್ದಾರೆ.
0
samarasasudhi
ಏಪ್ರಿಲ್ 17, 2024
ಮರ್ಕಝ್ ಗಾರ್ಡನ್ ಸಿವಿಲ್ ಸರ್ವಿಸ್ ಕೋಚಿಂಗ್ ಸೆಂಟರ್ ನಲ್ಲಿ ಪ್ರಾಥಮಿಕ ತರಬೇತಿಯ ನಂತರ ಫಝಲ್ ಅವರು ದಿಲ್ಲಿಯ ಜಾಮಿಯಾ ಮಿಲ್ಲಿಯಾದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದೀಗ ತಿರುವನಂತಪುರಂ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಫಝಲ್ ನೂರಾನಿ ಅವರು ಮಲಪ್ಪುರಂ ಜಿಲ್ಲೆಯ ಪರಪನಂಙಾಡಿಯ ಬಾವಾ -ಅಸ್ರಾಬೀ ದಂಪತಿಯ ಪುತ್ರ.
ಫಝಲ್ ನೂರಾನಿ ಅವರ ಈ ಅಮೋಘ ಸಾಧನೆಯನ್ನು ಜಾಮಿಯಾ ಮದೀನತುನ್ನೂರ್ ಅಧ್ಯಕ್ಷ ಕಾಂತಪುರಂ ಎ.ಪಿ.ಅಬೂಕರ್ ಮುಸ್ಲಿಯಾರ್ ಹಾಗೂ ಡೈರೆಕ್ಟರ್ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ವಿಶೇಷವಾಗಿ ಅಭಿನಂದಿಸಿದ್ದಾರೆ.