ಆ ಮೇಲೆ ಸಶೀಲಾ ರಾಣಿಯ ಅಪೇಕ್ಷೆಯಂತೆ ಜಯಸಿಂಹನಿಗೆ ಪಟ್ಟಾಭಿಷೇಕವಾಯಿತು. ಜಯಸಿಂಹ ರಾಜನು ವೇಲಾಪುರ (ಐಲ, ಉಪ್ಪಳ)ದ ಅಂಬಾವನದಲ್ಲಿ ಮಹಿಷ ಮರ್ದಿನಿ ಕ್ಷೇತ್ರವನ್ನು ಊರ್ಜಿತಗೊಳಿಸಿ ಭೂಮಿಯನ್ನು ಉಂಬಳಿ ಬಿಟ್ಟನು. ಸೀಮೆಯ ಮೂವತ್ತೆರಡು ಗ್ರಾಮಗಳಲ್ಲಿ ಉತ್ತಮ ಗ್ರಾಮ ಪದ್ಧತಿಯನ್ನು ನೆಲೆಗೊಳಿಸಿದನು. ಜಯಸಿಂಹನು ಧರ್ಮದಿಂದ ರಾಜ್ಯಭಾರ ಮಾಡುತ್ತ ಆಕಾಶದಲ್ಲಿ ಸೂರ್ಯನು ಶೋಭಿಸುವಂತೆ ಶೋಭಿಸಿದನು.
ಮೇಲಿನ ಶಾಸನದಲ್ಲಿ ಹೇಳಿದ ಕನ್ಯಾದಾನವು ಚೋವಬ್ಬರಸಿಗೆ ಕೊಡಲ್ಪಟ್ಟಿದ್ದರಿಂದ ಜಯಸಿಂಹನು ಮೊಗ್ರಾಲ್ ಪುತ್ತೂರು ಬೂಡಿನ ಒಬ್ಬ ಬಲ್ಲಾಳ ಸ್ತ್ರೀಯನ್ನು ವರಿಸಿರಬೇಕು. ಆ ಮನೆತನದವರು ತೆಂಕಲಿನ ಸ್ತ್ರೀಯರೊಡನೆ ಸಂಪರ್ಕಮಾಡುವುದು ಅನಂತರದ ಒಂದು ಕ್ರಮವಾಗಿ ತೋರುವುದು.
ಬೇಲ, ಮಾಯಂಪಾಡಿ, ಪೆರಡಾಲ ಗ್ರಾಮದ ಪಟ್ಟಾಜೆಯಲ್ಲಿ ಕುಂಬಳೆ ಅರಸರ ಬೇರೆ ಬೇರೆ ಅರಮನೆಗಳಿದ್ದುವು.
'ಕುಂಬಳೆ ಸೀಮೆಯ ಸತ್ಯ' 'ಕುಂಬಳೆಯ ಧರ್ವ ಕೊಪ್ಪರಿಗೆ' ಎಂಬ ಮಾತುಗಳು ಕುಂಬಳೆ ಅರಸರ 'ಸತ್ಯ ರತ್ನಾಕರ’ 'ಧರ್ಮ ಸಿಂಹಾಸನದ' ಎಂಬ ಬಿರುದು ನಡವಳಿಗಳಿಂದ ಚೋದಗೊಂಡಿರಬೇಕು.
-ಮುಗಿಯಿತು-
ನಾಳೆಯಿಂದ ಹೊಸ ಕತೆ-ಬೇಕಲ ರಾಮ ನಾಯಕರು ಬರೆದ ‘ಮಂಜೇಶ್ವರದ ಮುತ್ತಿಗೆ’-ನಿರೀಕ್ಷಿಸಿ.




.jpeg)

