ನವದೆಹಲಿ: 2019ರಿಂದ ಈಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) 400ಕ್ಕೂ ಅಧಿಕ ಆಸ್ತಿಗಳು, ಕೋಟ್ಯಂತರ ರೂಪಾಯಿ ಹಣ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
0
samarasasudhi
ಮೇ 17, 2024
ನವದೆಹಲಿ: 2019ರಿಂದ ಈಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) 400ಕ್ಕೂ ಅಧಿಕ ಆಸ್ತಿಗಳು, ಕೋಟ್ಯಂತರ ರೂಪಾಯಿ ಹಣ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅವುಗಳಲ್ಲಿ ಬಹುತೇಕ ಆಸ್ತಿ ಭಯೋತ್ಪಾದಕರು, ನಕ್ಸಲರು, ಪ್ರತ್ಯೇಕತಾವಾದಿಗಳು ಮತ್ತು ಅವರ ಬೆಂಬಲಿಗರಿಗೆ ಸೇರಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
403 ಮುಟ್ಟುಗೋಲು ಪ್ರಕರಣಗಳಲ್ಲಿ 206 ಮುಟ್ಟುಗೋಲು ರಾಂಚಿಯ ಎನ್‌ಐಎ ಘಟಕದಿಂದಲೇ ನಡೆದಿದೆ. ಇದು ದೇಶದಲ್ಲಿ ಒಂದೇ ಕಡೆ ಮುಟ್ಟುಗೋಲು ಹಾಕಿಕೊಂಡ ಅತ್ಯಧಿಕ ಆಸ್ತಿಯಾಗಿದೆ.
ಇದರಲ್ಲಿ ಬಿಹಾರ ಮತ್ತು ಜಾರ್ಖಂಡ್‌ನ ನಕ್ಸಲರ ಬ್ಯಾಂಕ್ ಖಾತೆಗಳು ಮತ್ತು ಗಮನಾರ್ಹ ಪ್ರಮಾಣದ ನಗದು ಸಹ ಸೇರಿದೆ.
ಜಮ್ಮು ಎನ್‌ಐಎ ಘಟಕದಿಂದ ಭಯೋತ್ಪಾದಕರಿಗೆ ಸೇರಿದ 100 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಚಂಡೀಗಢದ ಎನ್‌ಐಎ ಘಟಕದಿಂದ ಪ್ರತ್ಯೇಕತಾವಾದಿಗಳು ಮತ್ತು ಅವರ ಬೆಂಬಲಿಗರಿಗೆ ಸೇರಿದ 33 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎರಡು ಆಸ್ತಿಗಳು ನಿಷೇಧಿತ ಖಾಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಅವರಿಗೆ ಸೇರಿದ್ದಾಗಿವೆ.
2019ರಿಂದ 2024ರ ಮೇ 16ರ ಅವಧಿಯಲ್ಲಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.