HEALTH TIPS

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಛೇರಿಯ ಉದ್ಘಾಟನೆ ಮೇ 26 ರಂದು

                 ಮಂಜೇಶ್ವರ :ಕಾಸರಗೋಡು ಜಿಲ್ಲಾ ಕುಲಾಲ ಸಂಘ(ರಿ) ಮಂಜೇಶ್ವರ, ತೂಮಿನಾಡು ಇದರ ನೂತನ ಕಟ್ಟಡದ ಪ್ರಧಾನ ಕಛೇರಿಯ ಉದ್ಘಾಟನ ಸಮಾರಂಭ ಮೇ 26 ರಂದು ಬೆಳಗ್ಗೆ 10.30ರಿಂದ ಜರಗಲಿದ್ದು ಸಮಾರಂಭದ  ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಶ್ರೀವೀರನಾರಾಯಣ ದೇವಸ್ಥಾನದ ಆಡಳಿತ ಮೊಕೇಸ್ತರ ಪುರುμÉೂೀತ್ತಮ ಕುಲಾಲ್ ಕಲ್ಬಾವಿ, ವಿ. ಕೆ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಮಾಲಕ ವಿಠ್ಠಲ ಕುಲಾಲ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಕೈರಂಗಳ, ಪಾವನಿ ಸಿಲ್ಕ್ ಮತ್ತು ಫ್ಯಾಬ್ರಿಕ್ಸ್ ಪಾಲುದಾರ ಸರಸಿಂಹ ಕುಲಾಲ್ ಕಡoಬಾರು, ಅಡ್ಕ ಕುಲಾಲ ಬಂಗೇರ ಮೂಲಸ್ಥಾನದ ಮೂಲ್ಯಣ್ಣ ಹರೀಶ್ ಬಂಗೇರ, ಲೀಲಾವತಿ ಟೀಚರ್ ತಲಪಾಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.  ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ  ಅಧ್ಯಕ್ಷತೆ ವಹಿಸಿದ್ದರು. 

            26 ರಂದು ಬೆಳಗ್ಗೆ 9.30ರಿಂದ 10.30 ರವರೆಗೆ  ಶ್ರೀ ನಾಗಮೂಲ ಭಜನಾ ಮಂಡಳಿ ಅಡ್ಕ ಕುಂಜತ್ತೂರು ಇವರಿಂದ  ಭಜನಾ ಕಾರ್ಯಕ್ರಮವು ಜರಗಲಿದೆ.ಕುಲಾಲ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಜಿಲ್ಲಾ ಕುಲಾಲ ಸಂಘದ ಕಚೇರಿ ಉದ್ಘಾಟನಾ ಸಹಾಯಾರ್ಥ ಹಮ್ಮಿಕೊಂಡ ಅದೃಷ್ಟ ನಿಧಿ ಕೂಪನ್ ನ ಡ್ರಾ ನಡೆಯಲಿದೆ.ಸಮಸ್ತ ಕುಲಾಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries