ಬೆಂಗಳೂರು : ಬೆಂಗಳೂರು ಕೋರಮಂಗಲದಲ್ಲಿರುವ ಶ್ರೀ ಎಡನೀರು ಮಠ ಶ್ರೀ ಕೃಷ್ಣ ದೇವಾಲಯದ 30 ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶನಿವಾರ ಆರಂಭಗೊಂಡಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ಗಣಹೋಮ, ಚಕ್ರಾಬ್ಜ ಪೂಜೆ, ಪಂಚಾಮೃತಾಭಿಷೇಕ, ನಾಳಿಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 6.30 ರಿಂದ ವಿಶೇಷ ಅಲಂಕಾರ ಪೂಜೆ, ಪುಷ್ಪ ರಥೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಶನಿವಾರ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧುಮತಿ ವರುಣ್ ಬ್ಯಾನರ್ಜಿ ಅವರ ಶಿಷ್ಯೆಯರಾದ ಹನ್ಸಿಕ ವಿಶ್ವಕುಮಾರ್,ನಿತ್ಯತಲ್ಲಪಾರಗಡ, ದೀಪಾ ಪದುಮಾರು ಅವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.






