ಮಲಪ್ಪುರಂ: 60 ಅಡಿ ಆಳದ ಬಾವಿ ಹಾಗೂ 16 ರಿಂಗ್‍ಗಳು ಒಳಕ್ಕೆ ಕುಸಿದ ಘಟನೆ ನಡೆದಿದೆ. ಮಂಚೇರಿ ಪಯ್ಯನಾಡ್ ಕುಟ್ಟಿಪಾರದಲ್ಲಿ ಪಜುಕ್ಕರ ವಿಜಯನ್ ಎಂಬುವವರ ಮನೆ ಸಮೀಪದ ಬಾವಿಯಲ್ಲಿ ಈ ಘಟನೆ ನಡೆದಿದೆ.
ಬಾವಿ ಪೂರ್ತಿ ಕುಸಿದಿದ್ದು ಮಣ್ಣು ನೀರುಗಳು ಮಿಶ್ರವಾಗಿದೆ. ನಿನ್ನೆ ಬೆಳಗ್ಗೆ ನೀರು ತರಲು ತೆರಳಿದಾಗ ಬಾವಿ ಕಾಣೆಯಾಗಿರುವುದು ಗಮನಕ್ಕೆ ಬಂತು.
ಬಾವಿಯಲ್ಲಿ ಒಂದು ಮೀಟರ್ ಆಳದ ನೀರು ಇತ್ತು. ನೀರನ್ನು ಪಂಪ್ ಮಾಡಿದ ಮೋಟಾರ್ ಭೂಗತವಾಗಿದೆ. ಇದು ಸುಮಾರು 30 ವರ್ಷಗಳಷ್ಟು ಹಳೆಯದಾದ ದೀರ್ಘಕಾಲಿಕ ಬಳಕೆಯ ಬಾವಿಯಾಗಿದೆ. ಕುಟುಂಬಗಳು ಪ್ರಸ್ತುತ ಜಲ ಪ್ರಾಧಿಕಾರದ ಕೊಳವೆ ನೀರನ್ನು ಅವಲಂಬಿಸಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಭೂವಿಜ್ಞಾನ ಇಲಾಖೆಗೂ ವರದಿ ನೀಡಲಾಗಿದೆ.





