HEALTH TIPS

ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಮೃತ್ಯು

       ಕಾಸರಗೋಡು: ಮನೆ ವಠಾರದಲ್ಲಿ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ಮಂಜೇಶ್ವರ ಮಜಿಬೈಲ್‍ನಲ್ಲಿ ನಡೆದಿದೆ. ಇಲ್ಲಿನ ಕರಿಬೈಲ್ ಹೊಸಗದ್ದೆ ನಿವಾಸಿ ದಿ. ಡಾನಿಲ್ ಡಿ.ಸೋಜ ಅವರ ಪುತ್ರಿ ಪ್ರಿನ್ಸಿಲ್ಲಾ(8)ಮೃತಪಟ್ಟ ಬಾಲಕಿ. ಮಜಿಬೈಲ್ ಸರ್ಕಾರಿ ಶಾಲೆ ಎರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ಪ್ರಿನ್ಸಿಲ್ಲಾ, ಶನಿವಾರ ಬೆಳಗ್ಗೆ  ಮನೆ ವಠಾರದಲ್ಲಿ ಆಟವಾಡುತ್ತಿರುವ ಮಧ್ಯೆ ನೀರು ಕೇಳಿ ಕುಡಿದಿದ್ದಳು. ಅಲ್ಪ ಹೊತ್ತಿನಲ್ಲಿ ಕುಸಿದು ಬಿದ್ದ ಬಾಲಕಿಯನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಿರಲಿಲ್ಲ. ಹೃದಯಾಘಾತದಿಂದ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries