ನವದೆಹಲಿ: ಪ್ರತಿಪಕ್ಷ ನಾಯಕರುಗಳು ಅವರ ಭಾಷಣಗಳಲ್ಲಿ ಬಳಸಿದ ಕೆಲವು ಪದಗಳನ್ನು ಪ್ರಸಾರ ಮಾಡುವುದನ್ನು ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊ (ಎಐಆರ್) ತಡೆದಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಹಾಗೂ ಫಾರ್ವರ್ಡ್ ಬ್ಲಾಕ್ ನಾಯಕ ಜಿ.
0
samarasasudhi
ಮೇ 18, 2024
ನವದೆಹಲಿ: ಪ್ರತಿಪಕ್ಷ ನಾಯಕರುಗಳು ಅವರ ಭಾಷಣಗಳಲ್ಲಿ ಬಳಸಿದ ಕೆಲವು ಪದಗಳನ್ನು ಪ್ರಸಾರ ಮಾಡುವುದನ್ನು ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊ (ಎಐಆರ್) ತಡೆದಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಹಾಗೂ ಫಾರ್ವರ್ಡ್ ಬ್ಲಾಕ್ ನಾಯಕ ಜಿ.
ಪ್ರತಿಪಕ್ಷ ನಾಯಕರುಗಳು ಬಳಸಿದ 'ಕರಾಳ ಕಾನೂನುಗಳು', ಕೋಮುವಾದಿ ಸರಕಾರ' ಹಾಗೂ ' ಮುಸ್ಲಿಂ' ಮತ್ತಿತರ ಪದಗಳ ಪ್ರಸಾರವನ್ನು ಕೈಬಿಡಲಾಗಿದೆ. ಭಾಷಣವನ್ನು ವೀಡಿಯೋ ರೆಕಾರ್ಡ್ ಮಾಡುವ ಮುನ್ನ ಈ ಪದಗಳನ್ನು ಕೈಬಿಡಬೇಕೆಂದು ದೂರದರ್ಶನವು ವಿಪಕ್ಷ ನಾಯಕರುಗಳಿಗೆ ಮನವಿ ಮಾಡಿತ್ತು. ಕೋಮುವಾದಿ ಸರ್ವಾಧಿಕಾರಿ ಆಡಳಿತವೆಂಬ ಪದವನ್ನು ರೆಕಾರ್ಡ್ ಮಾಡುವುದನ್ನು ಕೈಬಿಡಬೇಕೆಂದು ಯಚೂರಿ ಅವರಿಗೆ ಸೂಚಿಸಲಾಗಿತ್ತು.
ಪ್ರಸಾರ ಭಾರತಿ ಅಧಿಕಾರಿಗಳ ನಿರ್ದೇಶನದಂತೆ ಯಚೂರಿ ಹಾಗೂ ದೇವರಾಜನ್ ಅವರು ಸೂಚಿಸಲ್ಪಟ್ಟ ಪದಗಳನ್ನು ತಮ್ಮ ಭಾಷಣದ ರೆಕಾರ್ಡಿಂಗ್ನಿಂದ ತೆಗೆದುಹಾಕಿದ್ದರು.
ವಿಚಿತ್ರವೆಂದರೆ ನನ್ನ ಮೂಲ ಇಂಗ್ಲೀಷ್ ಭಾಷಣದ ಭಾಷಾಂತರವಾಗಿದ್ದ ಹಿಂದಿ ಆವೃತ್ತಿಯ ಭಾಷಣದಲ್ಲಿ ಈ ಅಧಿಕಾರಿಗಳಿಗೆ ಯಾವುದೇ ತಪ್ಪು ಕಂಡುಬಂದಿರಲಿಲ್ಲ. ಆದರೆ, ಅಧಿಕಾರಿಗಳ ನಿರ್ದೇಶನದ ಪ್ರಕಾರ ಇಂಗ್ಲೀಷ್ ಭಾಷಣದ ರೆಕಾರ್ಡಿಂಗ್ ಅನ್ನು ಪರಿಷ್ಕರಿಸಲಾಗಿದೆ'' ಂಗು ಯಚೂರಿ ತಿಳಿಸಿದರು.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಲ್ಲಿನ ಕೆಲವ ತಾರತಮ್ಯವಾದಿ ಕಾನೂನುಗಳನ್ನು ಪ್ರಸ್ತಾಪಿಸಿದ ತನ್ನ ಭಾಷಣದ ಒಂದು ಸಾಲಿನಲ್ಲಿದ್ದ ಮುಸ್ಲಿಂ ಎಂಬ ಪದವನ್ನು ಕೈಬಿಡಬೇಕೆಂದು ತನಗೆ ಅಧಿಕಾರಿಗಳು ಸೂಚಿಸಿದ್ದಾಗಿ ಫಾರ್ವರ್ಡ್ ಬ್ಲಾಕ್ ನಾಯಕ ಜಿ.ದೇವರಾಜನ್ ತಿಳಿಸಿದ್ದಾರೆ.