ನಮ್ಮಲ್ಲಿ ಸಾಮಾನ್ಯವಾಗಿ ಹೆಚ್ಚು ಕಿರುಚಾಡುವವರು, ಕೋಪದಿಂದ ಕುದಿಯುವವರನ್ನು ನೋಡಿದಾಗೆಲ್ಲ “ಅವರು ಹೃದಯ ಸಿಡಿದು ಹೋಗುವಂತೆ ಕಿರುಚುತ್ತಿದ್ದಾರಲ್ಲ” ಎಂದು ಹಿಂದಿನ ಹಿರಿಯ ತಲೆಮಾರಿನವರೆಲ್ಲ ಆಡುತ್ತಿದ್ದುದನ್ನು ಕೇಳಿಯೇ ಇರುತ್ತೇವೆ. ಆದರೆ ಇಂದದು ನಿಜವಾಗಿದೆ. ಹೇಗೆ ಗೊತ್ತೇ?....ಓದಿ.
ಒಬ್ಬ ವ್ಯಕ್ತಿಯು ಹೆಚ್ಚು ಕೋಪಗೊಂಡರೆ, ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ ಅಲ್ಪಾವಧಿಯ ಕೋಪವೂ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ತಂಡ ಇದನನು ಬಹಿರಂಗಪಡಿಸಿದೆ.
ಜನರು ಕೋಪಗೊಂಡಾಗ, ಅದು ಕೆಲವು ಸೆಕೆಂಡುಗಳ ಕಾಲ ಕೂಡ ರಕ್ತನಾಳಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎನ್ನುತ್ತದೆ ಅಧ್ಯಯನ. ಈ ಕಾರಣದಿಂದಾಗಿ, ಸ್ವಲ್ಪ ಸಮಯದ ಕೋಪವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ ಮತ್ತು ಪಾಶ್ರ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಅಧ್ಯಯನವು ಯುವಕರ ಮೇಲೆ ಕೇಂದ್ರೀಕರಿಸಿ ನಡೆಸಲಾಗಿದೆ. ಅವರು ಕೋಪಗೊಂಡಾಗ ರಕ್ತನಾಳಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗುತ್ತದೆ ಮತ್ತು ಹೃದ್ರೋಗಗಳು ಉಂಟಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಅಧ್ಯಯನದ ಅವಧಿಯಲ್ಲಿ ಯಾರೂ ಪಾಶ್ರ್ವವಾಯು ಅಥವಾ ಹೃದಯಾಘಾತವನ್ನು ಹೊಂದಿರಲಿಲ್ಲ, ಆದರೆ ಕೋಪಗೊಂಡ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಸಹ ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ.
ಅಧ್ಯಯನದಲ್ಲಿ ಭಾಗವಹಿಸುವವರ ಒಂದು ಗುಂಪು ಕೋಪ, ಆತಂಕ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸಿ ಪ್ರಯೋಗ ನಡೆಸಲಾಯಿತು. ರಕ್ತದೊತ್ತಡದ ಮಟ್ಟ ಮತ್ತು ರಕ್ತನಾಳಗಳ ವಿಸ್ತರಣೆಯನ್ನು ಪರಿಶೀಲಿಸಲಾಯಿತು. ನಂತರ ಕೋಪದಿಂದ ಇದ್ದವರ ರಕ್ತನಾಳಗಳ ವಿಸ್ತರಣೆಯ ಸಾಮಥ್ರ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಆದ್ದರಿಂದ, ಇದು ನಿರಂತರವಾಗಿ ಸಂಭವಿಸುವುದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಕೋಪ ಮಾತ್ರವಲ್ಲದೇ ಆತಂಕ ಮತ್ತು ಖಿನ್ನತೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.





