ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಮುಖ ಆಯಕಟ್ಟಿನ ಭಾಗವಾಗಿರುವ ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಮಾಣ ಕಾಮಗಾರಿಯು ಕಾನೂನುಬಾಹಿರವಾದದ್ದಾಗಿದೆ ಎಂದು ಭಾರತವು ಚೀನಾ ಬಳಿ ಪ್ರಬಲವಾಗಿ ಪ್ರತಿಭಟನೆ ದಾಖಲಿಸಿದೆ. 'ಶಕ್ಸ್‌ಗಾಮ್ ಕಣಿವೆಯು ಭಾರತದ ಭಾಗವಾಗಿದೆ.
0
samarasasudhi
ಮೇ 03, 2024
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಮುಖ ಆಯಕಟ್ಟಿನ ಭಾಗವಾಗಿರುವ ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಮಾಣ ಕಾಮಗಾರಿಯು ಕಾನೂನುಬಾಹಿರವಾದದ್ದಾಗಿದೆ ಎಂದು ಭಾರತವು ಚೀನಾ ಬಳಿ ಪ್ರಬಲವಾಗಿ ಪ್ರತಿಭಟನೆ ದಾಖಲಿಸಿದೆ. 'ಶಕ್ಸ್‌ಗಾಮ್ ಕಣಿವೆಯು ಭಾರತದ ಭಾಗವಾಗಿದೆ.
'ಈ ಸಂಬಂಧ ನಮ್ಮ ನಿರಾಕರಣೆಯನ್ನು ನಿರಂತರವಾಗಿ ತಿಳಿಸಿದ್ದೇವೆ. ಭೂ ಪ್ರದೇಶವನ್ನು ಬದಲಿಸುವ ಕಾನೂನುಬಾಹಿರ ಯತ್ನಗಳ ವಿರುದ್ಧ ನಾವು ಚೀನಾಗೆ ನಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದೇವೆ' ಎಂದು ಅವರು ಪ್ರತಿಕ್ರಿಯಿಸಿದರು.
'ನಮ್ಮ ಹಿಸತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಮತ್ತಷ್ಟು ಕಾಯ್ದಿರಿಸಿದ್ದೇವೆ' ಎಂದು ಅವರು ಹೇಳಿದರು.