ಸಿಂಗಪುರ: ಇಲ್ಲಿಯ ನೂತನ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಸಂಪುಟದಲ್ಲಿ ಭಾರತ ಮೂಲದ ಸಂಸದ ಮುರಳಿ ಪಿಳ್ಳೈ ಅವರು ಕಾನೂನು ಮತ್ತು ಸಾರಿಗೆ ರಾಜ್ಯ ಖಾತೆ ಸಚಿವರಾಗಿ ನೇಮಕವಾಗಲಿದ್ದಾರೆ.
0
samarasasudhi
ಮೇ 14, 2024
ಸಿಂಗಪುರ: ಇಲ್ಲಿಯ ನೂತನ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಸಂಪುಟದಲ್ಲಿ ಭಾರತ ಮೂಲದ ಸಂಸದ ಮುರಳಿ ಪಿಳ್ಳೈ ಅವರು ಕಾನೂನು ಮತ್ತು ಸಾರಿಗೆ ರಾಜ್ಯ ಖಾತೆ ಸಚಿವರಾಗಿ ನೇಮಕವಾಗಲಿದ್ದಾರೆ.
ಸಿಂಗಪುರದ ಪ್ರಧಾನಿ ಕಚೇರಿಯು ಸಂಭವನೀಯ ಸಂಪುಟ ಸದಸ್ಯರ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.
ಆಡಳಿತಾರೂಢ ಪೀಪಲ್ಸ್ ಆಯಕ್ಷನ್ ಪಾರ್ಟಿ ಸದಸ್ಯರಾಗಿರುವ ಪಿಳ್ಳೈ (56) ಅವರು ವೃತ್ತಿಯಿಂದ ವಕೀಲರು. ಜುಲೈ 1ರಂದು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಾಕಿ ಸಂಸದರು ಮೇ 15ರಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಲ್ಲಿಯ 'ಸ್ಟ್ರೇಯ್ಟ್ಸ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.
20 ವರ್ಷಗಳ ಅವಧಿಗೆ ಸಿಂಗಾಪುರ ಪ್ರಧಾನಿಯಾಗಿದ್ದ ಲೀ ಸಿಯೆನ್ ಲೂಂಗ್ ಅವರು ಈಚೆಗಷ್ಟೇ ನಿವೃತ್ತಿ ಘೋಷಿಸಿದರು. ಅವರಿಂದ ತೆರವುಗೊಂಡ ಪ್ರಧಾನಿ ಸ್ಥಾನವನ್ನು ವಾಂಗ್ ಅವರು ಬುಧವಾರ ಅಲಂಕರಿಸಲಿದ್ದಾರೆ.