ಬದಿಯಡ್ಕ: ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಕೇರಳ ಪ್ರಾಂತ ಶೌರ್ಯ ಶಿಕ್ಷಣವರ್ಗದ ಸಮಾರೋಪ ಸಮಾರಂಭದ ಪ್ರಯುಕ್ತ ಭಾನುವಾರ ಸಂಜೆ ಬದಿಯಡ್ಕ ಪೇಟೆಯಲ್ಲಿ ದುರ್ಗಾವಾಹಿನಿ ಪಥಸಂಚಲನ ನಡೆಯಿತು. ಬದಿಯಡ್ಕ ಕಿನ್ನಿಮಾಣಿ ಪೂಮಾಣಿ ಕ್ಷೇತ್ರದಿಂದ ಹೊರಟು ಪ್ರಧಾನ ಬಸ್ಸುತಂಗುದಾಣ, ಕೆಡೆಂಜಿ ತಿರುವು ಹಾಗೂ ಮೇಲಿನ ಮೇಟೆಯ ವೃತ್ತದಲ್ಲಾಗಿ ಶ್ರೀ ಗಣೇಶಮಂದಿರದಲ್ಲಿ ಸಮಾಪನಗೊಂಡಿತು.
ಆಕರ್ಷಕವಾದ ಘೋಷ್‍ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಭಗವಾಧ್ವಜಕ್ಕೆ ವಿವಿಧೆಡೆಗಳಲ್ಲಿ ಮಾತೆಯರು ಪುಷ್ಪಾರ್ಚನೆಗೈದು ಸಂಭ್ರಮಿಸಿದರು. ಕಳೆದ ಸೋಮವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲ್‍ನಲ್ಲಿ ಶೌರ್ಯ ಶಿಕ್ಷಣವರ್ಗವು ಆರಂಭವಾಗಿತ್ತು. 300ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕೇರಳ ಪ್ರಾಂತ ವಿಭಾಗ, ಜಿಲ್ಲಾ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.




