HEALTH TIPS

ಚಿನ್ಮಯಶಂಕರಂ ರಥಯಾತ್ರೆಗೆ ಚಾಲನೆ: ಜೀವನದ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ: ಬಂಗಾಳದ ರಾಜ್ಯಪಾಲರು

                        ಪಿರವಂ : ಸ್ವಾಮಿ ಚಿನ್ಮಯಾನಂದರ 108ನೇ ಜನ್ಮದಿನಾಚರಣೆ ಹಾಗೂ ಜಗದ್ಗುರು ಶ್ರೀ ಆದಿಶಂಕರಾಚಾರ್ಯಸ್ವಾಮಿಗಳ ಜನ್ಮದಿನದ ಪ್ರಯುಕ್ತ ಗ್ಲೋಬಲ್ ಚಿನ್ಮಯ ಮಿಷನ್ ಆಯೋಜಿಸಿರುವ ಚಿನ್ಮಯ ಶಂಕರಂ 2024ರ ರಥಯಾತ್ರೆಗೆ ಚಾಲನೆ ನೀಡಲಾಗಿದೆ.

                     ಬಂಗಾಳ ರಾಜ್ಯಪಾಲ ಡಾ.ಸಿ.ವಿ. ಆನಂದ ಬೋಸ್ ರಥಯಾತ್ರೆಗೆ ಚಾಲನೆ ನೀಡಿದರು. ಜಗದ್ಗರು ಆದಿ ಶಂಕರಾಚಾರ್ಯರು ಜನಿಸಿದ ಎರ್ನಾಕುಳಂ ವೆಲಿಯನಾಡ್ ನಲ್ಲಿ ಚಿನ್ಮಯ ಇಂಟರ್‍ನ್ಯಾಶನಲ್ ಫೌಂಡೇಶನ್‍ನಿಂದ ಪಯಣ ಆರಂಭವಾಯಿತು. ರಥಯಾತ್ರೆ ಆರಂಭದ ಭಾಗವಾಗಿ ಡಾ.ಸಿ.ವಿ ಆನಂದ ಬೋಸ್ ಅವರು ಚಿನ್ಮಯ ಶಂಕರ್ ಮುಖ್ಯ ಸಂಯೋಜಕ ಬ್ರಹ್ಮಚಾರಿ ಸುಧೀರ್ ಚೈತನ್ಯ ಅವರಿಗೆ ಧ್ವಜ ಹಸ್ತಾಂತರಿಸಿದರು.

                   ಚಿನ್ಮಯಾನಂದ ಸ್ವಾಮಿಗಳ ಬಗ್ಗೆ ಯೋಚಿಸುವಾಗ ಭಗವದ್ಗೀತೆ ನೆನಪಾಗುತ್ತದೆ ಎಂದು ಡಾ. ಸಿವಿ. ಆನಂದ ಬೋಸ್ ಹೇಳಿದರು. ಜೀವನದ ಎಲ್ಲ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವಿದೆ ಎಂದು ಹೇಳುವುದು ಸತ್ಯ ಎಂದು ರಾಜ್ಯಪಾಲರು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿದರು. ಭಗವದ್ಗೀತೆ ಕೇವಲ ಆಧ್ಯಾತ್ಮಿಕ ಪುಸ್ತಕ ಮಾತ್ರವಲ್ಲ, ಅದು ಉತ್ತಮ ನಿರ್ವಹಣಾ ಪುಸ್ತಕವೂ ಹೌದು. ದೇಶವನ್ನು ನಾಶಮಾಡಲು ಯತ್ನಿಸುತ್ತಿರುವ ವಿಧ್ವಂಸಕ ಶಕ್ತಿಗಳ ವಿರುದ್ಧ ಕಾರ್ಯೋನ್ಮುಖರಾಗಲು ಎಲ್ಲರೂ ಶಕ್ತಿ ತುಂಬಬೇಕು. ಸಾಂಸ್ಕøತಿಕ ಕ್ಷೇತ್ರದಲ್ಲಿ ಸೂಪರ್ ಪವರ್ ಆದ ಬಳಿಕ ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ ಎಂದರು.

                     ಈ ಸಂದರ್ಭದಲ್ಲಿ ರಾಜ್ಯಪಾಲರ ಪತ್ನಿ ಲಕ್ಷ್ಮಿ ಆನಂದ ಬೋಸ್ ಉಪಸ್ಥಿತರಿದ್ದರು. ಚಿನ್ಮಯ ಮಿಷನ್ ಕೇರಳ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಚಿನ್ಮಯ ಶಂಕರ ಕುರಿತು ವಿವರಿಸಿದರು. ಚಿನ್ಮಯಾನಂದ ಸ್ವಾಮಿಗಳ 108ನೇ ಜನ್ಮದಿನವನ್ನು ಈ ಬಾರಿ ಹಿಂದೂಗಳಲ್ಲಿ ನೂರೆಂಟು ಸಂಖ್ಯೆಯ ಪಾವಿತ್ರ್ಯತೆಯನ್ನು ಪರಿಗಣಿಸಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಚಿನ್ಮಯ ಮಿಷನ್ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್, ಟ್ರಸ್ಟಿ ರಾಜೇಶ್ ವಿ.ಪಟೇಲ್ ಡಾ.ಸಿ.ವಿ. ಆನಂದ ಬೋಸ್ ಮತ್ತು ಅಒಇಅIಖಿಙ-ಉಅ ಟ್ರಸ್ಟಿ ಡಾ. ಲೀಲಾ ರಾಮಮೂರ್ತಿ ಅವರು ಲಕ್ಷ್ಮಿ ಆನಂದ ಬೋಸ್ ಅವರಿಗೆ ಉಡುಗೊರೆಯನ್ನು ನೀಡಿದರು. ಚಿನ್ಮಯಶಂಕರಂ ಪ್ರಧಾನ ಸಂಚಾಲಕ ಎ. ಗೋಪಾಲಕೃಷ್ಣ ಸ್ವಾಗತಿಸಿದರು. ಚಿನ್ಮಯ ಮಿಷನ್ ಕೇರಳ ಮುಖ್ಯ ಸೇವಕ ಸುರೇಶ್ ಮೋಹನ್ ವಂದಿಸಿದರು. ಚಿನ್ಮಯ ಇಂಟರ್‍ನ್ಯಾಶನಲ್ ಫೌಂಡೇಶನ್‍ಗೆ ಆಗಮಿಸಿದ ರಾಜ್ಯಪಾಲರನ್ನು ಚಿನ್ಮಯ ಇಂಟರ್‍ನ್ಯಾಶನಲ್ ಫೌಂಡೇಶನ್ ಮುಖ್ಯಸ್ಥ ಆಚಾರ್ಯ ಸ್ವಾಮಿ ಶಾರದಾನಂದ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.

                ಎರ್ನಾಕುಳಂ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಿರುವ ಯಾತ್ರೆಗೆ ಮೇ 8ರಂದು ಚಿನ್ಮಯ ಶಂಕರಂನ ಪ್ರಮುಖ ಸ್ಥಳವಾದ ಎರ್ನಾಕುಳಂ ತಪ್ಪಾನ್ ಮೈದಾನದಲ್ಲಿ ಸ್ವಾಗತ ಕೋರಲಾಗುವುದು. ಚಿನ್ಮಯ ಶಂಕರಂ 2024 ಮೇ 8 ರಿಂದ 12 ರವರೆಗೆ ಎರ್ನಾಕುಳ ತಪ್ಪಾನ್ ಮೈದಾನದಲ್ಲಿ ನಡೆಯಲಿದೆ. ವಿಶ್ವದಾದ್ಯಂತ ಚಿನ್ಮಯ ಮಿಷನ್ ಕೇಂದ್ರಗಳ ಸಹಯೋಗದಲ್ಲಿ ಐದು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಚಿನ್ಮಯ ಮಿಷನ್‍ನ ಆಚಾರ್ಯರು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿವಿಧ ವಿಷಯಗಳ ಕುರಿತು ಉಪನ್ಯಾಸ, ಭಗವದ್ಗೀತೆ, ಸೌಂದರ್ಯಲಹರಿ ಪಾರಾಯಣ ನಡೆಯಲಿದೆ. ಚಿನ್ಮಯಶಂಕರಂ ಸಮಾರೋಪ ವೇದಿಕೆಯಲ್ಲಿ ಆರ್‍ಎಸ್‍ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸುಪ್ರೀಂ ಕೋರ್ಟ್ ವಕೀಲ ಸಾಯಿ ದೀಪಕ್ ಮತ್ತಿತರರು ಇರುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries