HEALTH TIPS

ಕಾಸರಗೋಡು: ರಸ್ತೆ ಅಪಘಾತಕ್ಕೆ ದಂಪತಿ ಬಲಿ

            ಕಾಸರಗೋಡು: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಬೇತೂರುಪಾರ ಎಂಬಲಲ್ಲಿ ನಡೆದಿದೆ.

            ಮೃತಪಟ್ಟವರನ್ನು ಸ್ಕೂಟರ್ ಸವಾರರಾದ ಕೆ.ಕೆ ಕೃಷ್ಣನ್(71) ಮತ್ತು ಅವರ ಪತ್ನಿ ಚಿತ್ರಕಲಾ( 57) ಎಂದು ಗುರುತಿಸಲಾಗಿದೆ.

             ಕೇರಳ ವರ್ತಕರ ಸಂಘದ ಸಮನ್ವಯ ಸಮಿತಿಯ ಸದಸ್ಯರಾಗಿದ್ದ ಕೃಷ್ಣನ್ ಅವರು ಬೇಡಡ್ಕದಲ್ಲಿ ವಸ್ತ್ರ ಮಳಿಗೆಯೊಂದನ್ನು ಹೊಂದಿದ್ದರು.

                 ಬೋವಿಕ್ಕಾನ - ಕುತ್ತಿಕೋಲ್ ರಸ್ತೆಯ ಬೇತೂರು ಪಾರ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಕೃಷ್ಣನ್ ದಂಪತಿ ಸಂಚರಿಸುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ದಂಪತಿಯನ್ನನು ಪರಿಸರ ವಾಸಿಗಳು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries