HEALTH TIPS

ಮಂಗಳೂರಿಗೆ ವಿಲಾಸಿ ಹಡಗು ಆಗಮನ

 ಮಂಗಳೂರು: ನವ ಮಂಗಳೂರು ಬಂದರಿಗೆ (ಪಣಂಬೂರು) ಏಳನೇ ಐಷಾರಾಮಿ ನಾರ್ವೇಜಿಯನ್ ಹಡಗು ರವಿವಾರ ಆಗಮಿಸಿದೆ. ಎಂಎಸ್ ಇನ್‌ಸಿಗ್ನಿಯಾ ಹೆಸರಿನ ಈ ಹಡಗು 509 ಪ್ರಯಾಣಿಕರು ಮತ್ತು 407 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿತ್ತು.

ಪ್ರವಾಸಿಗರು ಹಡಗಿನಿಂದ ಇಳಿಯುವಾಗ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಯಿತು.

ನವಮಂಗಳೂರು ಬಂದರು ಅಭಿವೃದ್ಧಿ ಪ್ರಾಧಿಕಾರವು ಪ್ರವಾಸಿಗರಿಗಾಗಿ ಬಹುವಲಸೆ ಕಸ್ಟಮ್ಸ್ ಕೌಂಟರ್‌ಗಳ ಜತೆಗೆ ವೈದ್ಯಕೀಯ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿತ್ತು.

ನಾರ್ವೇಜಿಯನ್ ಪ್ರವಾಸಿಗರಿಗೆ ಕರಾವಳಿಯ ವಿವಿಧ ದೇವಾಲಯಗಳು, ಪ್ರವಾಸಿ ತಾಣಗಳು, ಮಾರುಕಟ್ಟೆಗಳಿಗೆ ಭೇಟಿ ನೀಡಲು ಶಟಲ್ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ನಿಯೋಜಿಸಲಾಗಿತ್ತು. ಆಯುಷ್ ಸಚಿವಾಲಯದ ಕೇಂದ್ರದಲ್ಲಿ ಪ್ರವಾಸಿ ಗರು ಕೆಲಕಾಲ ಕಳೆದರು. ಕ್ರೂಸ್ ಲಾಂಜ್‌ಗೆ ಭೇಟಿ ನೀಡುವ ಪ್ರಯಾಣಿಕರಿಗೆ ಉಚಿತ ವೈ-ಫೈ, ವರ್ಚುವಲ್ ರಿಯಾಲಿಟಿ ಅನುಭವ ವಲಯವನ್ನು ಒದಗಿಸಲಾಯಿತು. ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.


ಭರತನಾಟ್ಯ ಸಹಿತ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳ ಮೂಲಕ ನಾರ್ವೇಜಿಯನ್ ಪ್ರವಾಸಿಗರನ್ನು ರಂಜಿಸಲು ಪ್ರಯತ್ನಿಸಲಾಯಿತು.

ಕಾರ್ಕಳದ ಗೋಮಟೇಶ್ವರ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಮಂಗಳೂರಿನ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries