ನವದೆಹಲಿ: ದೆಹಲಿಯ ರಾಮ ಮನೋಹರ ಲೋಹಿಯಾ(RML) ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ಇಂದು (ಗುರುವಾರ) ಮತ್ತಿಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಮೇ 10, 2024
ನವದೆಹಲಿ: ದೆಹಲಿಯ ರಾಮ ಮನೋಹರ ಲೋಹಿಯಾ(RML) ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ಇಂದು (ಗುರುವಾರ) ಮತ್ತಿಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಸಲಕರಣೆ ಪೂರೈಕೆದಾರ ಆಕರ್ಶನ್ ಗುಲಾಟಿ ಮತ್ತು ನರ್ಸ್ ಶಾಲು ಶರ್ಮಾ ಬಂಧಿತರು.
ಸ್ಟಂಟ್ ಹಾಗೂ ಇನ್ನಿತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಮಾರಾಟಗಾರರಿಂದ ಲಂಚ ಪಡೆದ ಆರೋಪ ಇವರ ಮೇಲಿದೆ.
ಪ್ರಕರಣದಲ್ಲಿ ಉಪಕರಣಗಳ ಪೂರೈಕೆದಾರ ನಾಗಪಾಲ್ ಟೆಕ್ನಾಲಜೀಸ್‌ನ ನರೇಶ ನಾಗಪಾಲ್ ಅವರನ್ನೂ ಬಂಧಿಸಲಾಗಿದೆ. ತಮ್ಮ ಉಪಕರಣಗಳ ಖರೀದಿಗೆ ಶಿಫಾರಸು ಮಾಡಲು ನಾಗಪಾಲ್ ಅವರು ಪರ್ವತಗೌಡ ಅವರಿಗೆ ₹2.48 ಲಕ್ಷ ಲಂಚ ನೀಡಿದ್ದರು.
ಭಾರ್ತಿ ಮೆಡಿಕಲ್ ಟೆಕ್ನಾಲಜೀಸ್‌ನ ಭರತ್ ಸಿಂಗ್ ದಲಾಲ್ ಅವರು ಡಾ. ರಾಜ್ ಅವರಿಗೆ ಯುಪಿಐ ಮೂಲಕ ಎರಡು ಬಾರಿ ಹಣ ಪಾವತಿಸಿದ್ದಾರೆ. ಅಬ್ರಾರ್ ಅಹಮದ್ ಅವರು ಆಸ್ಪತ್ರೆಯ ಕ್ಯಾಥ್ ಲ್ಯಾಬ್ ಮುಖ್ಯಸ್ಥ ರಜನೀಶ್ ಕುಮಾರ್ ಅವರಿಗೆ ಲಂಚ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.