HEALTH TIPS

ಆರ್.ಎಂ.ಪಿ ನಾಯಕ ಕೆಎಸ್ ಹರಿಹರನ್ ವಿವಾದಾತ್ಮಕ ಭಾಷಣ: ನಟಿ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿ ಮಾತು: ಕೇರಳದ RMP ನಾಯಕನ ವಿರುದ್ಧಪ್ರಕರಣ ದಾಖಲಿಸಿದ ವಡಗರ ಪೋಲೀಸರು

                ವಡಕರಮಲಯಾಳಂ ನಟಿ ಮಂಜು ವಾರಿಯರ್ ಹಾಗೂ ಸಿಪಿಐಎಂ ನಾಯಕಿ ಕೆಕೆ ಶೈಲಜಾ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೇರಳದ ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿ (RMP) ನಾಯಕ ಕೆ.ಎಸ್. ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ.

              ಅವರ ವಿರುದ್ಧ ಐಪಿಸಿ ಸೆಕ್ಷನ್ 509 ಅಡಿ ಪ್ರಕರಣ ದಾಖಲಿಸಲಾಗಿದೆ.

              ಇತ್ತೀಚೆಗೆ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರಿಹರನ್ ಅವರು ಶೈಲಜಾ ಹಾಗೂ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿಯಾಗಿ (sexist remarks) ಮಾತನಾಡಿದ್ದರು. ಇದರಿಂದ ಸಿಪಿಐಎಂ ಕಾರ್ಯಕರ್ತರು ಕೆರಳಿ ಪ್ರತಿಭಟನೆ ನಡೆಸಿದ್ದಲ್ಲದೇ, ಭಾನುವಾರ ರಾತ್ರಿ ಹರಿಹರನ್ ಮನೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು.

              ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಹರಿಹರನ್, ಪ್ರಕರಣ ದಾಖಲಾಗಿರುವುದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದಿದ್ದಾರೆ.

             ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿಯ ಕೇಂದ್ರ ಮಂಡಳಿಯ ಸದಸ್ಯರಾಗಿ ಹರಿಹರನ್ ಕಾರ್ಯನಿರ್ವಹಿಸುತ್ತಿದ್ದಾರೆ.

                ಮಲಯಾಳಂ ಮೂಲದ ಮಂಜು ವಾರಿಯರ್ ಅವರು ತಮಿಳು, ತೆಲುಗು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಬಹುಬೇಡಿಕೆ ನಟಿಯಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries