ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವ ಯಶಸ್ಸಿಗಾಗಿ ಸಮಾಲೋಚನಾ ಸಭೆ ಜುಲೈ 6ರಂದು ಬೆಳಗ್ಗೆ 10.30ಕ್ಕೆ ದೇವಾಲಯ ಸಭಾಂಗಣದಲ್ಲಿ ಜರುಗಲಿರುವುದು.
ಮಧೂರು ಕ್ಷೇತ್ರ ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ 2025 ಮಾ. 27ರಿಂದ ಏ. 7ರ ವರೆಗೆ ಜರುಗಲಿರುವುದು. ಈ ಬೃಹತ್ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಠಾಶೀಶರು, ದೇವಸ್ವಂ ಬೋರ್ಡ್ ಅಧಿಕಾರಿಗಳು, ವಿವಿಧ ಸಮಿತಿಗಳ ಕಾರ್ಯಕರ್ತರು ಹಾಗೂ ಭಕ್ತಾದಿಗಳ ಸಭೆ ಆಯೋಜಿಸಲಾಗಿದೆ. ಡಾ. ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸುವರು. ಉದ್ಯಮಿ, ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಉಪಸ್ಥಿತರಿರುವರು.
ಈ ಸಂದರ್ಭ ವಿವಿಧ ಸಮಿತಿಗಳು ತಕ್ಷಣ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಚರ್ಚೆ ಹಾಗೂ ಯೋಜನೆ ತಯಾರಿ, ಪಂಚಾಯಿತಿ ಸಮಿತಿಗಳ ರಚನೆ, ಪ್ರಚಾರಕಾರ್ಯಗಳ ಬಗ್ಗೆ ಚಿಂತನೆ, ಸಮಿತಿಯಲ್ಲಿ ಒಳಪಡಿಸಬೇಕಾದ ತಜ್ಞರ ಹೆಸರು ಸಂಗ್ರಹಿಸಿ ಈ ಬಗ್ಗೆ ಚರ್ಚೆ ನಡೆಯಲಿರುವುದು.





