ನವದೆಹಲಿ: ಎರಡು ಹಡಗುಗಳು ಡಿಕ್ಕಿ ಹೊಡೆದ ಪರಿಣಾಮ 80ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಮೈ-ಎನ್‌ಡೊಂಬೆ ಪ್ರಾಂತ್ಯದ ಕ್ವಾ ನದಿಯಲ್ಲಿ ನಡೆದಿದೆ. ಈ ಹಡಗು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
0
samarasasudhi
ಜೂನ್ 14, 2024
ನವದೆಹಲಿ: ಎರಡು ಹಡಗುಗಳು ಡಿಕ್ಕಿ ಹೊಡೆದ ಪರಿಣಾಮ 80ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಮೈ-ಎನ್‌ಡೊಂಬೆ ಪ್ರಾಂತ್ಯದ ಕ್ವಾ ನದಿಯಲ್ಲಿ ನಡೆದಿದೆ. ಈ ಹಡಗು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ಕಾಂಗೋಲೀಸ್ ನದಿಯಲ್ಲಿ ಹಡಗುಗ: ನಡುವೆ ಅಪಘಾತ ಸಾಮಾನ್ಯವಾಗಿದ್ದು, ಮಧ್ಯ ಆಫ್ರಿಕಾದ ದೇಶದ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಕೆಲವೇ ಸುಸಜ್ಜಿತ ರಸ್ತೆಗಳಿವೆ. ಆದ್ದರಿಂದ ನದಿಯ ಮೂಲಕ ಪ್ರಯಾಣಿಸುವುದು ಸಾಮಾನ್ಯವಾಗಿದೆ. ನದಿಯಲ್ಲಿ ಮಗುಚಿದ ಹಡಗಿನಲ್ಲಿ 270 ಮಂದಿ ಪ್ರಯಾಣಸಿಉತ್ತಿದ್ದರು ಎಂದು ತಿಳಿದು ಬಂದಿದೆ. 80ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗೋದ ಅಧ್ಯಕ್ಷರು, ಘಟನೆ ದುರದೃಷ್ಟಕರವಾಗಿದ್ದು, ಭವಿಷ್ಯದಲ್ಲಿ ಇಂತಹ ಅನಾಹುತವು ಮತ್ತೆ ಸಂಭವಿಸದಂತೆ ತಡೆಯಲು ತನಿಖೆಗೆ ಆದೇಶಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಫೆಬ್ರವರಿ ತಿಂಗಳಲ್ಲೂ ಓವರ್‌ಲೋಡ್‌ನಿಂದ ಹಡಗು ಮುಳುಗಿ ಹತ್ತಾರು ಜನರು ಈ ಭಾಗದಲ್ಲಿ ಪ್ರಾಣ ಕಳೆದುಕೊಂಡಿದ್ದರು. 2023 ರಲ್ಲಿ ಇಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತ್ತು. ಕಾಂಗೋ ನದಿಯಲ್ಲಿ ಹಡಗು ಮುಳುಗಿ ಕನಿಷ್ಠ 52 ಜನರು ಸಾವನ್ನಪ್ಪಿದ್ದರು. ಎಂಬಾಂಡಕಾ ಪಟ್ಟಣದ ಬಳಿ ಹಡಗು ಮಗುಚಿ ಬಿದ್ದಾಗ ಅದರಲ್ಲಿ 300ಕ್ಕೂ ಹೆಚ್ಚು ಮಂದಿ ಇದ್ದರು.