ಖಲಿಕನೌಜ್: ಉತ್ತರ ಪ್ರದೇಶದಲ್ಲಿ ಕೇಸರಿ ಪಾಳಯದ ಜಯದ ಓಟಕ್ಕೆ ತಡೆಯೊಡ್ಡುವ ಪಕ್ಷದ ಗುರಿ ಈಡೇರಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
0
samarasasudhi
ಜೂನ್ 06, 2024
ಖಲಿಕನೌಜ್: ಉತ್ತರ ಪ್ರದೇಶದಲ್ಲಿ ಕೇಸರಿ ಪಾಳಯದ ಜಯದ ಓಟಕ್ಕೆ ತಡೆಯೊಡ್ಡುವ ಪಕ್ಷದ ಗುರಿ ಈಡೇರಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 37 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿಯನ್ನು ಸರಿಗಟ್ಟಿದೆ. ಈ ಅಭೂತಪೂರ್ವ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, 'ಸಕಾರಾತ್ಮಕ ರಾಜಕೀಯಕ್ಕೆ ಬೆಂಬಲ ನೀಡಿ ಸಮಾಜವಾದಿ ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ಕೊಟ್ಟಿದ್ದಕ್ಕೆ ಕನೌಜ್ ಜನತೆಗೆ ನನ್ನ ಧನ್ಯವಾದಗಳು.
'ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಅವರ ಹಾದಿಯನ್ನು ಪಕ್ಷ ಪಾಲಿಸಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಂವಿಧಾನ, ಮೀಸಲಾತಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ನಕಾರಾತ್ಮಕ ರಾಜಕೀಯವನ್ನು ತೊಡೆದುಹಾಕಲು ಜನ ಮತ ಚಲಾಯಿಸಿದ್ದಾರೆ' ಎಂದರು.
ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರು ಉತ್ತರಪ್ರದೇಶದ ಮಣಿಪುರಿ ಕ್ಷೇತ್ರದಲ್ಲಿ 3,55,141 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.