HEALTH TIPS

ಶಿವಾಜಿ ನಗರ. ಮುಸೋಡಿ, ಪೆರಿಂಗಡಿ ಕಡಪ್ಪುರಗಳಲ್ಲಿ ವ್ಯಾಪಕ ಕಡಲ್ಕೊರೆತ

           ಮಂಜೇಶ್ವರ :  ಶಿವಾಜಿನಗರ, ಮುಸೋಡಿ ಹಾಗೂ ಪೆರಿಂಗಡಿ ಕಡಪ್ಪುರಗಳಲ್ಲಿ ಕಡಲ್ಗೊರೆತ ವ್ಯಾಪಕವಾಗಿದೆ. ಇದರಿಂದ ಹಲವು ಗಾಳಿ ಮರಗಳು ಈಗಾಗಲೇ ಸಮುದ್ರಪಾಲವಾಗಿವೆ. ಕಡಲ್ಗೊರೆತ ಕಳೆದ ಕೆಲವು ದಿನಗಳಿಂದ ಮುಂದುವರಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕವನ್ನು ಎದುರಿಸುತಿದ್ದಾರೆ.

                   ಕಡಲ್ಗೊರೆತ ಇದೇ ರೀತಿ ಮುಂದುವರಿದಲ್ಲಿ ಪರಿಸರದ ರಸ್ತೆ, ವಿದ್ಯುತ್ ಕಂಬಗಳು ಮತ್ತು ಮನೆ, ಮಸೀದಿಗಳು ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಕಳೆದ ವರ್ಷವೂ  ಹಲವು ಮನೆಗಳು  ಕಡಲ್ಗೊರೆತದಿಂದ ಸಮುದ್ರ ಪಾಲವಾಗಿದ್ದವು. ಪೆರಿಂಗಡಿಯಲ್ಲೂ ಕಡಲ್ಕೊರೆತ ತೀವೃಗೊಂಡಿದ್ದು, ಹಲವಾರು ಮರಗಳು ಹಾಗೂ ರಸ್ತೆ ಸಮುದ್ರ ಪಾಲಾಗಿದೆ.

             ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸುವುದರ ಬಗ್ಗೆ ಮೀನು ಕಾರ್ಮಿಕರು ಹಲವು ವಷರ್Àಗಳಿಂದ ಒತ್ತಾಯಿಸುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಮೀನು ಕಾರ್ಮಿಕರು ದೂರಿದ್ದಾರೆ. ತಡೆಗೋಡೆ ನಿರ್ಮಾಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

           ಮೀನು ಕಾರ್ಮಿಕರು ಪ್ರತಿದಿನವೂ ಕಡಲ್ಗೊರೆತದಿಂದ ಆತಂಕವನ್ನು ಎದುರಿಸುತಿದ್ದಾರೆ. ಅಧಿಕಾರಿಗಳು ತಕ್ಷಣವೇ ಇತ್ತ ಕಡೆ ಗಮನಹರಿಸಿ ಪರಿಸರದ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries