HEALTH TIPS

ಇಂದು ಮಧ್ಯರಾತ್ರಿಯಿಂದ ಟ್ರೋಲಿಂಗ್ ನಿಷೇಧ; ಕಾನೂನು ಉಲ್ಲಂಘಿಸಿ ಮೀನು ಹಿಡಿದರೆ ಕಠಿಣ ಕ್ರಮ: ಸೂಚನೆ

                  ತಿರುವನಂತಪುರಂ: ರಾಜ್ಯದಲ್ಲಿ 52 ದಿನಗಳ ಟ್ರೋಲಿಂಗ್ ನಿಷೇಧ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಜುಲೈ 31 ರಂದು ಟ್ರೋಲಿಂಗ್ ನಿಷೇಧ ಕೊನೆಗೊಳ್ಳಲಿದೆ. ಕರಾವಳಿಯಿಂದ 22 ಕಿಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶವಿರುವುದಿಲ್ಲ.

                ಟ್ರಾಲಿಂಗ್ ನಿಷೇಧವು ಮೀನು ಸಂಪತ್ತನ್ನು ಹೆಚ್ಚಿಸುವುದು ಮತ್ತು ಕಾರ್ಮಿಕರ ಆದಾಯವನ್ನು ಖಚಿತಪಡಿಸುವ ಲಕ್ಷ್ಯವಿರಿಸಲಾಗಿದೆ. ಕಾನೂನು ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.

                  ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ಟ್ರಾಲಿಂಗ್ ಬೋಟ್‍ಗಳಲ್ಲಿ ಮೀನುಗಾರರು ಮತ್ತು ಸಂಬಂಧಿತ ಕಾರ್ಮಿಕರಿಗೆ ಉಚಿತ ಪಡಿತರವನ್ನು ಒದಗಿಸಲಾಗುವುದು. ಟ್ರೋಲಿಂಗ್ ನಿಷೇಧ ಪ್ರಾರಂಭವಾಗುವ ಮೊದಲು ಅನ್ಯರಾಜ್ಯ ದೋಣಿಗಳು ಕೇರಳ ಕರಾವಳಿಯಿಂದ ಹೊರಕಳಿಸಲಾಗುತ್ತದೆ. 

                   ಟ್ರಾಲಿಂಗ್ ಬೋಟ್ ಗಳನ್ನು ಸಮುದ್ರದಿಂದ ಸುರಕ್ಷಿತ ಸ್ಥಳಕ್ಕೆ ಜೂನ್ 9ರಂದು ಸಂಜೆ ವೇಳೆಗೆ ಸ್ಥಳಾಂತರಿಸುವಂತೆ ಮೆರೈನ್ ಎನ್ ಪೋರ್ಸ್ ಮೆಂಟ್ ಮತ್ತು ಕೋಸ್ಟಲ್ ಪೆÇಲೀಸರು ಖಚಿತಪಡಿಸಿಕೊಳ್ಳಲಿದ್ದು, ನಿಷೇಧ ಉಲ್ಲಂಘಿಸುವ ಬೋಟ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೋಣಿ ಮತ್ತು ಒಳ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವ ಸಾಂಪ್ರದಾಯಿಕ ಮೀನುಗಾರರು ಟ್ರಾಲಿಂಗ್ ನಿಷೇಧದ ಸಮಯದಲ್ಲಿಯೂ ಸಮುದ್ರಕ್ಕೆ ತೆರಳಬಹುದು. 

                  ನಿಷೇಧದ ಅವಧಿಯಲ್ಲಿ ಇನ್‍ಬೋರ್ಡ್ ಬೋಟ್‍ಗಳನ್ನು ಹೊಂದಿರುವ ಒಂದು ಕ್ಯಾರಿಯರ್ ಬೋಟ್ ಅನ್ನು ಮಾತ್ರ ಅನುಮತಿಸಲಾಗುತ್ತದೆ. ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ 24 ಗಂಟೆ ಮೀನುಗಾರಿಕೆ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸಲಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries