ನವದೆಹಲಿ: ಲ್ಯಾಟಿನ್ ಅಮೆರಿಕದ ದೇಶದಲ್ಲಿ ಯುಪಿಐ ತರಹದ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಎನ್ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಮತ್ತು ಪೆರುವಿನ ರಿಸರ್ವ್ ಬ್ಯಾಂಕ್ ಪಾಲುದಾರಿಕೆ ಘೋಷಿಸಿವೆ.
0
samarasasudhi
ಜೂನ್ 06, 2024
ನವದೆಹಲಿ: ಲ್ಯಾಟಿನ್ ಅಮೆರಿಕದ ದೇಶದಲ್ಲಿ ಯುಪಿಐ ತರಹದ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಎನ್ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಮತ್ತು ಪೆರುವಿನ ರಿಸರ್ವ್ ಬ್ಯಾಂಕ್ ಪಾಲುದಾರಿಕೆ ಘೋಷಿಸಿವೆ.
ಜಾಗತಿಕವಾಗಿ ಪ್ರಸಿದ್ಧವಾದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದಕ್ಷಿಣ ಅಮೆರಿಕದಲ್ಲಿನ ಮೊದಲ ದೇಶ ಪೆರು ಆಗಲಿದೆ ಎಂದು ಎನ್ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
'ಯುಪಿಐ ತರಹದ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಪೆರುವಿನಲ್ಲಿ ನಿಯೋಜಿಸಲು ಎನ್ಐಪಿಎಲ್ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು ಪೆರುವಿನ ಸೆಂಟ್ರಲ್ ರಿಸರ್ವ್ ಬ್ಯಾಂಕ್ ಪಾಲುದಾರಿಕೆ ಘೋಷಿಸಿವೆ' ಎಂದು ಅದು ಹೇಳಿದೆ.
ಈ ಕಾರ್ಯತಂತ್ರದ ಪಾಲುದಾರಿಕೆಯು ಪೆರು ದೇಶದೊಳಗೆ ಸಮರ್ಥ ನೈಜ-ಸಮಯದ ಪಾವತಿ ವೇದಿಕೆಯನ್ನು ಸ್ಥಾಪಿಸಲು ಅಧಿಕಾರ ನೀಡುತ್ತದೆ. ವ್ಯವಹಾರಗಳ ನಡುವೆ ತ್ವರಿತ ಪಾವತಿಗಳನ್ನು ಸುಗಮಗೊಳಿಸುತ್ತದೆ. ಈ ಪಾಲುದಾರಿಕೆಯು ಪೆರುವಿನ ಆರ್ಥಿಕ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಎನ್ಪಿಸಿಐ ಇಂಟರ್ನ್ಯಾಷನಲ್ ಸಿಇಒ ರಿತೇಶ್ ಶುಕ್ಲಾ ಹೇಳಿದ್ದಾರೆ.