ಬದಿಯಡ್ಕ: ಕಲಿಕೆ ಮಾತ್ರವಲ್ಲ ಉತ್ತಮ ಸಂಸ್ಕøತಿಗೂ ಈ ಶಾಲೆ ಮಾದರಿ. ಕೇವಲ ಪುಸ್ತಕ ಜ್ಞಾನ ಮಾತ್ರವಲ್ಲದೆ ಅದಕ್ಕಿಂತ ಆಚೆಗೆ ಮೌಲ್ಯಗಳೂ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಕಾರಿ ಎಂದು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಅಭಿಪ್ರಾಯಪಟ್ಟರು.
ಅವರು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ಪ್ರವೇಶೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂಬ್ದಾಜೆ ಪಂಚಾಯತಿ ವಾರ್ಡ್ ಪ್ರತಿನಿಧಿ ಹರೀಶ್ ಗೋಸಾಡ ಮಾತನಾಡಿ, ವಿದ್ಯಾರ್ಥಿ ಜೀವನ ಸರಿಗೆಯ ಮೇಲಿನ ನಡಿಗೆಯಂತೆ, ಎಚ್ಚರ ತಪ್ಪದೆ ಓದು ಮುಂದುವರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷÀ ರಮೇಶಕೃಷ್ಣ ಪದ್ಮಾರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಳೆದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ವಿಶಿಷ್ಟ ಸಾಧನೆ ಮಾಡಿದ ಮೂವತ್ತೊಂಬತ್ತು ಮಂದಿ ವಿದ್ಯಾರ್ಥಿಗಳಿಗೆ ಸ್ಟಾಫ್ ಕೌನ್ಸಿಲ್ ಹಾಗೂ ಪಿಟಿಎ ವತಿಯಿಂದ ಸ್ಮರಣೆಕೆ ನೀಡಿ ಪುರಸ್ಕರಿಸಲಾಯಿತು. ಅಲ್ಲದೆ ಶ್ರೀ ಬಾಲಗೋಪಾಲ ಶರ್ಮ ಉಪ್ಪಂಗಳ, ರಕ್ಷಾ ಆರ್‍ಸಿಸಿಯ ವಿಠಲರಾಜ ಹಾಗೂ ಪಿ ಟಿ ಎ ಅಧ್ಯಕ್ಷ ರಮೇಶಕೃಷ್ಣ ಪದ್ಮಾರು ಇವರು ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುವ ನಗದು ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಸೇನಾನಿ ಹಾಗೂ ಉದ್ಯಮಿ ಬಾಲಚಂದ್ರ ಕೇಕುಣ್ಣಾಯ ಅವರು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಾವು ನೀಡುವ ಬಹುಮಾನವನ್ನು ವಿತರಿಸಿ ಮಾತನಾಡಿದರು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ ಎನ್, ಸ್ಟಾಪ್ ಕೌನ್ಸಿಲ್ ಕಾರ್ಯದರ್ಶಿ ಗಣೇಶ ಪಿಎಸ್ ಶುಭ ಹಾರೈಸಿದರು. ಪ್ರಾಂಶುಪಾಲ ಸತೀಶ ವೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕರಾದ ಡಾ ಶ್ರೀಧರನ್ ನಂಬೂದಿರಿ ಸ್ವಾಗತಿಸಿ, ಅಧ್ಯಾಪಿಕೆ ಸೌಮ್ಯ ಪಿ.ಬಿ. ವಂದಿಸಿದರು. ಅಧ್ಯಾಪಕ ಬಾಲಚಂದ್ರನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು ವಿದ್ಯಾರ್ಥಿಗಳು, ರಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

.jpg)
.jpg)
.jpg)
