HEALTH TIPS

ಮತಾಂತರಗೊಂಡ ಯುವತಿಗೆ ತನ್ನಿಚ್ಛೆ ಪ್ರಕಾರ ನಡೆದುಕೊಳ್ಳಲು ನ್ಯಾಯಾಲಯ ಆದೇಶ-ಪ್ರಿಯಕರನ ಜತೆ ತೆರಳಿದ ಯುವತಿ

                ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಇಷಾ ಎಂಬಾಕೆ ಅನ್ಯ ಕೋಮಿನ ಯುವಕನನ್ನು ಮದುವೆಯಾಗಿ ಆಯಿಷಾ ಸಾರಾ ಹೆಸರಿನೊಂದಿಗೆ ವಾಪಸಾಗಿದ್ದು, ಈಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ತನ್ನಿಚ್ಛೆ ಪ್ರಕಾರ ನಡೆದುಕೊಳ್ಳಲು ನ್ಯಾಯಾಲಯ ತೀರ್ಪಿತ್ತಿದೆ. ಈ ಹಿನ್ನೆಲೆಯಲ್ಲಿ ಯುವತಿ ಅನ್ಯ ಕೋಮಿನ ತನ್ನ ಪ್ರಿಯಕರನ ಜತೆ ತೆರಳಿದ್ದಳೆ. 

                24ರ ಹರೆಯದ ಇಷಾ ಜೂ. 7ರಂದು ನಾಪತ್ತೆಯಾಗಿರುವ ಬಗ್ಗೆ ಈಕೆ ಮನೆಯವರು ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈಕೆಯ ಹುಡುಕಾಟ ನಡೆಸುವ ಮಧ್ಯೆ ಇಷಾ ಉಳ್ಳಾಲದ ಯುವಕನನ್ನು ವರಿಸಿ ತನ್ನ ಹೆಸರನ್ನೂ ಬದಲಾಯಿಸಿಕೊಂಡಿದ್ದಳು. ಇವರಿಬ್ಬರೂ ಬೆಂಗಳೂರಿನಲ್ಲಿ ವಿವಾಹಿತಳಾಗಿದ್ದು, ಈಕೆ ಎರಡು ವರ್ಷದ ಹಿಂದೆಯೇ ಮತಾಂತರಗೊಂಡಿರುವುದಾಗಿಯೂ ಮಾಹಿತಿಯಿದೆ.  ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದ ಪೊಲಿಸರು ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries