ಒತ್ತಡದ ಜೀವನದಲ್ಲಿ ಅನೇಕರಿಗೆ ಕಣ್ಣಿನ ಸುತ್ತ ಕಪ್ಪು ಕಾಣಿಸಿಕೊಳ್ಳುತ್ತದೆ.. ನೀವಂದುಕೊಂಡಂತೆ ಇದು ಒತ್ತಡದಿಂದ ಮಾತ್ರವಲ್ಲ ನಿದ್ರೆಯ ಕೊರತೆಯಿಂದಲೂ ಉಂಟಾಗುವ ಸಮಸ್ಯೆಯಾಗಿದೆ.. ಫೋನ್ ಮತ್ತು ಕಂಪ್ಯೂಟರ್ ಬಳಕೆಯಿಂದಲೂ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತವೆ..
0
samarasasudhi
ಜೂನ್ 21, 2024
ಒತ್ತಡದ ಜೀವನದಲ್ಲಿ ಅನೇಕರಿಗೆ ಕಣ್ಣಿನ ಸುತ್ತ ಕಪ್ಪು ಕಾಣಿಸಿಕೊಳ್ಳುತ್ತದೆ.. ನೀವಂದುಕೊಂಡಂತೆ ಇದು ಒತ್ತಡದಿಂದ ಮಾತ್ರವಲ್ಲ ನಿದ್ರೆಯ ಕೊರತೆಯಿಂದಲೂ ಉಂಟಾಗುವ ಸಮಸ್ಯೆಯಾಗಿದೆ.. ಫೋನ್ ಮತ್ತು ಕಂಪ್ಯೂಟರ್ ಬಳಕೆಯಿಂದಲೂ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತವೆ..
ಡಾರ್ಕ್ ಸರ್ಕಲ್‌ಗಳು ಅಷ್ಟು ಬೇಗ ಮಾಯವಾಗುವುದಿಲ್ಲ. ಆದರೆ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಒಂದೇ ದಿನದಲ್ಲಿ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಬಹುದು.
-ಅಮೀರ್ ಖಾನ್ ಸಹೋದರಿ ಯಾರು ಗೊತ್ತಾ? ಈಕೆ ನಟಿಯೂ ಹೌದು, ನಿರ್ಮಾಪಕಿಯೂ ಹೌದು...!
ಒಂದೇ ದಿನದಲ್ಲಿ ಕಪ್ಪು ವರ್ತುಲವನ್ನು ಕಡಿಮೆ ಮಾಡಲು ಟೊಮೇಟೊ ಮತ್ತು ನಿಂಬೆ ತುಂಬಾ ಪರಿಣಾಮಕಾರಿ. ಇದಕ್ಕಾಗಿ ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಟೊಮೆಟೊ ರಸವನ್ನು ಹಾಕಿ, ಇದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕಣ್ಣಿನ ಕೆಳಗೆ ಹಚ್ಚಿ, 10 ರಿಂದ 15 ನಿಮಿಷಗಳ ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕಪ್ಪು ವರ್ತುಲಗಳು ಒಂದೇ ದಿನದಲ್ಲಿ ಮಾಯವಾಗುತ್ತವೆ.
ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಡಾರ್ಕ ಸರ್ಕಲ್‌ಗಳನ್ನು ಕಡಿಮೆ ಮಾಡಲು ಸಹ ಇದನ್ನು ಬಳಸಬಹುದು. ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ತೆಳುವಾಗಿ ತುರಿ ಮಾಡಿ. ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಡಾರ್ಕ್ ಸರ್ಕಲ್ ಕ್ರಮೇಣ ಕಡಿಮೆಯಾಗುತ್ತದೆ.