HEALTH TIPS

ಮೂತ್ರಕೋಶ ಚಕಿತ್ಸೆಗೆ ನೆರವಾಗುವಿರಾ: ಪತ್ರಕರ್ತ ಅಬ್ದುಲ್ಲ ಕುಂಬಳೆ ನೆರವಿನ ನಿರೀಕ್ಷೆಯಲ್ಲಿ

                 ಕುಂಬಳೆ: ಹಲವು ವರ್ಷಗಳಿಂದ ಕುಂಬಳೆಯಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರತನಾಗಿರುವ ಅಬ್ದುಲ್ಲ ಕುಂಬಳೆ(ಕಾರವಲ್)  ಅವರು ಮೂತ್ರಕೋಶ (ಕಿಡ್ನಿ) ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಎರಡೂ ಕಿಡ್ನಿಗಳು ಗಾತ್ರದಲ್ಲಿ ಚಿಕ್ಕದಾಗುತ್ತಿರುವ ಅಪೂರ್ವ ರೋಗ ಬಾಧಿಸಿದ ಇವರು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಪೂರ್ಣ ಆರೋಗ್ಯವಂತನಾಗಬೇಕಾದರೆ ಅತೀ ಶೀಘ್ರ ಕಿಡ್ನಿ ಬದಲಾಯಿಸಿ ಅಳವಡಿಸಬೇಕೆಂದು ವೈದ್ಯರು ತಿಳಿಸಿದ್ದಾರೆ. ಭಾರೀ ಮೊತ್ತ ಅಗತ್ಯವುಳ್ಳ ಈ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸಲಾಗದೆ ಅಬ್ದುಲ್ಲ ಹಾಗೂ ಕುಟುಂಬ ಸಂಕಷ್ಟದಲ್ಲಿ ತೊಳಲಾಡುವಂತಾಗಿದೆ. ಸಹೃದಯ ನಾಗರಿಕರ ಸಹಾಯ ಲಭಿಸಬಹುದೆಂಬ ನಿರೀಕ್ಷೆ ಈ ಕುಟುಂಬದ್ದಾಗಿದೆ. 

               ಈ ಹಿನ್ನೆಲೆಯಲ್ಲಿ ಇವರಿಗೆ ಸಹಾಯವೊದಗಿಸಲು ಅಬ್ದುಲ್ಲ ಚಿಕಿತ್ಸಾ ಸಹಾಯ ಸಮಿತಿ  ರೂಪೀಕರಿಸಲಾಗಿದೆ. ಶಾಸಕ ಎ. ಕೆ.ಎಂ ಅಶ್ರಫ್ ಅಧ್ಯಕ್ಷರಾಗಿ, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಕಾರ್ಯಾಧ್ಯಕ್ಷರಾಗಿ, ಮಾಧ್ಯಮ ಕಾರ್ಯಕರ್ತ ಸುರೇಂದ್ರನ್ ಜಿಮೇನಿ ಕನ್ವೀನರ್, ಕುಂಬಳೆ ಪಂಚಾಯತ್ ಅಧ್ಯಕ್ಷೆ  ಯು .ಪಿ ತಾಹಿರಾ ಯೂಸಫ್ ಕೋಶಾಧಿಕಾರಿಯಾಗಿರುವ ಚಿಕಿತ್ಸಾ ಸಹಾಯ ಸಮಿತಿ ಸಕ್ರಿಯಗೊಳಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಂಸ್ಕøತಿಕ ರಂಗದ ಕಾರ್ಯಕರ್ತರು, ಕುಂಬಳೆ ಬದರ್ ಜುಮಾ ಮಸೀದಿ ಪದಾಧಿಕಾರಿಗಳು , ಸಾಮಾಜಿಕ ಕಾರ್ಯಕರ್ತರು ಸಮಿತಿಯ ಸದಸ್ಯರಾಗಿದ್ದಾರೆ. 

         ಸಹೃದಯರ ಉದಾರ ನೆರವು ನಿರೀಕ್ಷಿಸಲಾಗಿದ್ದು, ಸಹಾಯ ನೀಡಬೇಕಾದ ಬ್ಯಾಂಕ್ ನ ಪೂರ್ಣ ಮಾಹಿತಿ: ಕೆನರಾ ಬ್ಯಾಂಕ್ ಕುಂಬಳೆ ಶಾಖೆ.

                                                        ಖಾತೆ ನಂಬ್ರ: 110179038769

                                                                  IFSC: CNRB0014206
                                                           ಗೂಗಲ್ ಪೇ/ಫೋನ್ ಪೇ
                                                                       8590216232
                                                                      9947188385

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries