HEALTH TIPS

ನಿರ್ಮಾಣ ಸಂಸ್ಥೆಯಿಂದ ಚಪ್ಪಲಿ ಕಳವು-ಆರೋಪಿ ಬಂಧನ: ಕಳವುಗೈದು ರಸ್ತೆಬದಿ ಮಾರಾಟ ನಡೆಸುತ್ತಿದ್ದ ಸಂದರ್ಭ ಕಾರ್ಯಾಚರಣೆ

           ಕಾಸರಗೋಡು: ಸೀತಾಂಗೋಳಿಯ ಕಿನ್ಫ್ರಾ ಪಾರ್ಕ್‍ನ ಚಪ್ಪಲಿ ತಯಾರಿ ಸಂಸ್ಥೆಯಿಂದ 10ಲಕ್ಷ ರೂ. ಮೌಲ್ಯದ ಚಪ್ಪಲಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಸೋಟ್ ನಿವಾಸಿ ಆಶಿಕ್(27)ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

             ಚಪ್ಪಲಿ ನಿರ್ಮಾಣ ಘಟಕದಿಂದ ಮೇ 22ರಂದು ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಚಪ್ಪಲಿ ಕಳವುಗೈದಿರುವ ಬಗ್ಗೆ ಸಂಸ್ಥೆಯ ಪಾಲುದಾರ ನಸೀರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರೂ. ಕಳ್ಳರ ಪತ್ತೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ನಸೀರ್, ಕಳ್ಳನ ಪತ್ತೆಗೆ ಸ್ವಪ್ರಯತ್ನ ನಡೆಸುತ್ತಿರುವ ಮಧ್ಯೆ ಕಾಸರಗೋಡು ನಗರದಲ್ಲಿ ರಸ್ತೆಬದಿ ಚಪ್ಪಲಿ ಮಾರಾಟ ನಡೆಸುತ್ತಿದ್ದ ವ್ಯಕ್ತಿಬಳಿ ಗ್ರಾಹಕನ ಸೋಗಿನಲ್ಲಿ ತೆರಳಿ  ತಪಾಸಣೆ ನಡೆಸಿದಾಗ ತಮ್ಮ ಸಂಸ್ಥೆಯಿಂದ ಕಳವುಗೈದ ಚಪ್ಪಲಿಯ ಬಗ್ಗೆ ಮಆಹಿತಿ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸಂಸ್ಥೆಯಿಂದ ಕಳವುಗೈದ ಚಪ್ಪಲಿ ಹಾಗೂ ಲ್ಯಾಪ್‍ಟಾಪನ್ನು ಮಜಿಬೈಲಿನ ಮನೆಯೊಂದರಲ್ಲಿ ಇರಿಸಿರುವ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ಮಜಿಬೈಲಿನ ಮನೆಗೆ ತೆರಳಿ ಚಪ್ಪಲಿ ಹಾಗೂ ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries