ಪೆರ್ಲ: ನಾಲಂದ ಚಾರಿಟೇಬಲ್ ಟ್ರಸ್ಟ್ ಹಾಗೂ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ- 49 ಜಂಟಿ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.
ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಅಬಕಾರಿ ದಳದ ಸಿವಿಲ್ ಎಕ್ಸೈಸ್ ಅಧಿಕಾರಿ ಜನಾರ್ದನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ನೀಡಿ ಮಾದಕ ವಸ್ತು ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ, ಸಾಮಾಜಿಕ ದುಷ್ಪರಿಣಾಮ ಹಾಗೂ ನಿμÉೀಧಿತ ಮಾದಕವಸ್ತು ಉತ್ಪನ್ನಗಳನ್ನು ಕೈವಶವಿರಿಸುವುದು, ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮೊದಲಾದ ಕೃತ್ಯಗಳಲ್ಲಿ ತೊಡಗಿ ಕೊಂಡವರಿಗೆ ಲಭಿಸುವ ಶಿಕ್ಷೆಯ ಕುರಿತು ಮಾಹಿತಿ ನೀಡಿದರು.
ಎನ್ನೆಸ್ಸೆಸ್ ಸಹಾಯಕ ಯೋಜನಾಧಿಕಾರಿ ಮನೋಜ್ ಕುಮಾರ್ ಪಿ. ಸ್ವಾಗತಿಸಿ, ಸ್ವಯಂಸೇವಕಿ ಹರ್ಷಿತಾ ವಂದಿಸಿದರು. ಶ್ರೀಜಾ ನಿರೂಪಿಸಿದರು. ವಿದ್ಯಾರ್ಥಿಗಳು ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಕೈಗೊಂಡರು.




.jpg)
