ನವದೆಹಲಿ: ಸುಲಿಗೆ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಜಾರ್ಖಂಡ್‌ನ ಮೂರು ಸ್ಥಳಗಳಲ್ಲಿ ವ್ಯಾಪಕ ತನಿಖೆ ನಡೆಸಿತು ಎಂದು ಗುರುವಾರ ಹೊರಡಿಸಲಾಗಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.
0
samarasasudhi
ಜೂನ್ 21, 2024
ನವದೆಹಲಿ: ಸುಲಿಗೆ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಜಾರ್ಖಂಡ್‌ನ ಮೂರು ಸ್ಥಳಗಳಲ್ಲಿ ವ್ಯಾಪಕ ತನಿಖೆ ನಡೆಸಿತು ಎಂದು ಗುರುವಾರ ಹೊರಡಿಸಲಾಗಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.
ಹಜಾರಿಬಾಗ್ ಮತ್ತು ರಾಂಚಿ ಜಿಲ್ಲೆಗಳಲ್ಲಿ ಬುಧವಾರ ಶೋಧಕಾರ್ಯ ನಡೆಸಲಾಯಿತು. ಈ ಸ್ಥಳಗಳಿಂದ ಡಿಜಿಟಲ್ ಉಪಕರಣಗಳು, ಒಂದು ಫಾರ್ಚುನರ್ ವಾಹನ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ವತ್ತುಗಳು ಜಾರ್ಖಂಡ್‌ನ ಗ್ಯಾಂಗ್‌ಸ್ಟರ್ ಅಮನ್ ಸಾಹು ನೇತೃತ್ವದ ತಂಡಕ್ಕೆ ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಣ ವಸೂಲಿ ಮಾಡುವ ಮತ್ತು ಸರ್ಕಾರದ ಕೆಲಸಗಳಿಗೆ ಅಡ್ಡಿ ಉಂಟುಮಾಡುವ ಉದ್ದೇಶದಿಂದ ಅಮನ್ ನೇತೃತ್ವದ ತಂಡವು 2020ರ ಡಿಸೆಂಬರ್‌ನಲ್ಲಿ ದಾಳಿ ನಡೆಸಿತ್ತು. 2021ರ ಮಾರ್ಚ್‌ನಲ್ಲಿ ಎನ್‌ಐಎ ತನಿಖೆ ಆರಂಭಿಸಿತ್ತು. ಈ ವರ್ಷ ಫೆಬ್ರುವರಿಯಲ್ಲಿ ಅಮನ್ ಸಹಚರ ಶಂಕರ್ ಯಾದವ್ ಎಂಬಾತನ್ನು ಬಂಧಿಸಿತ್ತು.