ಜಮ್ಮು: ಭಾರಿ ಮಳೆಯ ನಡುವೆಯೇ, 5,600 ಯಾತ್ರಾರ್ಥಿಗಳ ತಂಡವು ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಅಮರನಾಥದ ಎರಡು ಮೂಲಶಿಬಿರಗಳಾದ ಬಾಲ್‌ಟಾಲ್ ಮತ್ತು ಪಹಲ್ಗಾಮ್ ಗುರುವಾರ ಪ್ರಯಾಣ ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಜುಲೈ 05, 2024
ಜಮ್ಮು: ಭಾರಿ ಮಳೆಯ ನಡುವೆಯೇ, 5,600 ಯಾತ್ರಾರ್ಥಿಗಳ ತಂಡವು ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಅಮರನಾಥದ ಎರಡು ಮೂಲಶಿಬಿರಗಳಾದ ಬಾಲ್‌ಟಾಲ್ ಮತ್ತು ಪಹಲ್ಗಾಮ್ ಗುರುವಾರ ಪ್ರಯಾಣ ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಏಳನೇ ತಂಡವಾಗಿದ್ದು, 4,487 ಪುರುಷರು, 1,011 ಮಹಿಳೆಯರು, 10 ಮಕ್ಕಳು ಮತ್ತು 188 ಸಾಧುಗಳು ಮತ್ತು ಸಾಧ್ವಿಯರು 219 ವಾಹನಗಳಲ್ಲಿ ಜಮ್ಮುವಿನಿಂದ ಬೆಳಿಗ್ಗೆ 3.13ಕ್ಕೆ ಹೊರಟರು.
ಬುಧವಾರ ಒಂದೇದಿನ 30 ಸಾವಿರಕ್ಕೂ ಹೆಚ್ಚು ಯಾತ್ರಿಗಳು ಅಮರನಾಥ ದರ್ಶನ ಪಡೆದಿದ್ದಾರೆ. ಈ ವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ದರ್ಶನ ಪಡೆದಂತಾಗಿದೆ ಎಂದು ಅವರು ಹೇಳಿದ್ದಾರೆ.
ಯಾತ್ರೆಯು ಆಗಸ್ಟ್ 19ರಂದು ಮುಕ್ತಾಯವಾಗಲಿದೆ.