ಮಂಜೇಶ್ವರ: ಸತೀಶ ಸುವರ್ಣ ಕೊಡ್ಲಮೊಗರು ಅವರ ಕಥಾ ಸಂಯೋಜನೆಯಲ್ಲಿ ಯೋಗೀಶ ರಾವ್ ಚಿಗುರುಪಾದೆ ಅವರು ಪದ್ಯ ರಚನೆಗೈದಿರುವ ‘ಅಗಸ್ತ್ಯ ಮಹಿಮೆ’ ನೂತನ ಯಕ್ಷಗಾನ ಪ್ರಸಂಗದ ಲೋಕಾರ್ಪಣೆ ಹಾಗೂ ಪ್ರದರ್ಶನ ಜುಲೈ 8 ರಂದು ಸೋಮವಾರ ಅಪರಾಹ್ನ 2.30ಕ್ಕೆ ಕರೋಪಾಡಿ ಗ್ರಾಮದ ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾಪರಮೇಶ್ವರಿ ದೇವಸ್ಥಾನ ದೇವಸ್ಥಾನದಲ್ಲಿ ಜರಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




