ಪೆರ್ಲ: ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ರಾಜ್ ಮೋಹನ್ ಉಣ್ಣಿತ್ತಾನ್ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಎಣ್ಮಕಜೆ ಪಂಚಾಯತಿನಾದ್ಯಂತ ಶುಕ್ರವಾರ ಪರ್ಯಟನೆಯ ನಡೆಸಿದರು. ಎಣ್ಮಕಜೆ ಯುಡಿಎಫ್ ವತಿಯಿಂದ ಚವರ್ಕಾಡಿನಿಂದ ಆರಂಭಗೊಂಡ ಪರ್ಯಟನೆಯ ಉದ್ಘಾಟನೆಯನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ನಡೆಸಿದರು.
ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಾನು ದ್ವಿತೀಯ ಬಾರಿ ಅತ್ಯಧಿಕ ಮತಗಳನ್ನುಗಳಿಸಿದ ಕಾರಣಕ್ಕೆ ಶ್ಲಾಘಿಸಿ ಮತದಾರರಿಗೆ ಕೃತಜ್ಞತೆ ಸಮರ್ಪಿಸಿದರು. ಸಭೆಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್, ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ರಾಧಾಕೃಷ್ಣ ನಾಯಕ್ ಶೇಣಿ,ಲಕ್ಷ್ಮಣ ಪ್ರಭು ಕುಂಬಳೆ, ರಮ್ಲ ಇಬ್ರಾಹಿಂ, ಕುಸುಮಾವತೀ ಟೀಚರ್,ಮಾಯಿಲ ನಾಯ್ಕ್, ಅಬ್ದುಲ್ ರಸಾಕ್ ಪೆರ್ಲ, ಹಮೀದ್ ಅಜಿಲಡ್ಕ,ಹಮೀದಾಲಿ ಕಂದಲ್ ಅಬೂಬಕ್ಕರ್ ಪೆರ್ದನೆ, ಎಣ್ಮಕಜೆ ಮುಸ್ಲಿಂಲೀಗ್ ಅಧ್ಯಕ್ಷ ಎ.ಕೆ.ಶೇರಿಫ್,ಸಿದ್ದೀಕ್ ಹಾಜಿ ಖಂಡಿಗೆ,ಸಿದ್ಧಿಕ್ ವಳಮುಗೇರು,ಹಕೀಂ ಖಂಡಿಗೆ ಆಯಿμÁ ಎ.ಎ,ಆಶ್ರಫ್ ಅಮೆಕ್ಕಳ, ,ಕಾಂಗ್ರೆಸ್ ನೇತಾರರಾದ ಅಮು ಅಡ್ಕಸ್ಥಳ,ಆನಂದ ಮವ್ವಾರು,ಐತ್ತಪ್ಪ ಕುಲಾಲ್,ಅಬ್ದುಲ್ಲ ಕುರೆಡ್ಕ, ರಸಾಕ್ ನಲ್ಕ, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಫಾರೂಕ್ ಪಳ್ಳಂ,ರಾಜು ಜೋನ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು.
ಚವರ್ಕಾಡಿನಿಂದ ತೆರೆದ ವಾಹನದಲ್ಲಿ ಸಾಗಿ ಬಂದ ಪರ್ಯಟನೆ ಪೆರ್ಲ ಪೇಟೆಯಲ್ಲಿ ಸಮಾಪ್ತಿಗೊಂಡಿತು.

.jpg)
