HEALTH TIPS

ಮಂಜೇಶ್ವರ ಶಾಸಕರ ನಿಸ್ಕøಯತೆ ಅಭಿವೃದ್ಧಿಗೆ ಮಾರಕ -ಬಿಜೆಪಿ

        ಮಂಜೇಶ್ವರ:  ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಯಾವುದೇ ಹೊಸ ಯೋಜನೆಗಳನ್ನು ತರುವಲ್ಲಿ ಮಂಜೇಶ್ವರ ಶಾಸಕರು ಪ್ರಯತ್ನ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಹೆದ್ದಾರಿ ಯೋಜನೆ ಮಾತ್ರ ಮಂಡಲದಲ್ಲಿ ಕಾಣಿಸುತ್ತಿದೆ. ಹೈಯರ್ ಸೆಕೆಂಡರಿಯ ಪ್ಲಸ್ ಟು ಸೀಟುಗಳ ಅಭಾವ ಎದ್ದುಕಾಣುತಿದೆ. ಎಲ್ಲಾ ವಿದ್ಯಾರ್ಥಿಗಳು ಮಂಗಳೂರನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಮಿನಿ ಮಾಸ್ ಲೈಟ್ ಗಳನ್ನು ಅವರು ಸ್ಥಾಪಿಸುವುದು ಒಂದು ಕೋಮಿನ ಧಾರ್ಮಿಕ ಕೇಂದ್ರಗಳ ಪಕ್ಕದಲ್ಲಿ ಮಾತ್ರ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.

           ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆ ಹೊಸಂಗಡಿ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಜರಗಿತು. ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರ.ಕಾರ್ಯದರ್ಶಿ  ವೇಲಾಯುದನ್ ಸಭೆ ಉದ್ಘಾಟಿಸಿದರು. ಮುಖಂಡರಾದ ವಿಜಯ್ ರೈ, ಅಶ್ವಿನಿ ಎಂ.ಎಲ್, ಎ.ಕೆ ಕಯ್ಯಾರ್, ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ, ಸುನಿಲ್ ಅನಂತಪುರ, ವಸಂತ ಮಯ್ಯ, ವಿಘ್ನೇಶ್ವರ ಮಾಸ್ತರ್ ಕೆದುಕೋಡಿ, ಯಾದವ ಬಡಾಜೆ, ಭಾಸ್ಕರ ಪೊಯ್ಯೆ, ಹರಿಶ್ಚಂದ್ರ ಎಂ, ನಾರಾಯಣ ನಾಯ್ಕ್ ಮಿಂಜ, ಸಂತೋಷ್ ದೈಗೋಳಿ, ಆಶಾಲತಾ ಪೆಲಪಾಡಿ ಮೋರ್ಚಾ ನೇತಾರರು, ಜನಪ್ರತಿನಿದಿನಗಳು ಉಪಸ್ಥಿತರಿದ್ದರು.

           ಜುಲೈ 28 ಕುಂಬಳೆಯಲ್ಲಿ ಕಾರ್ಯಕರ್ತರ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಕೆ.ವಿ.ಭಟ್ ಸ್ವಾಗತಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries