ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ 13ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಶ್ರೀ ಅಯ್ಯಪ್ಪ ಭಜನಾ ಮಂದಿರ ಮೀಯಪದವಿನಲ್ಲಿ ಜರಗಿತು.
ಮಂದಿರದ ಗುರುಸ್ವಾಮಿ ರಂಜಿತ್ ಕುಮಾರ್ ಜೋಡುಕಲ್ಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್, ಕ್ಲಬ್ ನ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ಕೃಷ್ಣ ಪ್ರಸನ್ನ, ಕಾರ್ಯದರ್ಶಿ ರವಿಶಂಕರ್ ರಾವ್, ಕೋಶಾಧಿಕಾರಿ ಮನೋಜ್ ರೈ, ಸದಸ್ಯರಾದ ನಿಶಾನ್ ರೈ, ಕಿರಣ್ ಭಟ್, ರಘು ರಾವ್, ಅನೂಪ್ ರೈ, ಆಶಿತ್ ಶೆಟ್ಟಿ, ಮಂದಿರದ ಸದಸ್ಯರಾದ ಸದಾಶಿವ ಶೆಟ್ಟಿ, ಮೋಹನ, ದೀಕ್ಷಿತ್, ಜಗದೀಶ್ ಶೆಟ್ಟಿ, ಚಂದಪ್ಪ ಮುಂತಾದವರು ಉಪಸ್ಥಿತರಿದ್ದರು.

.jpg)
