HEALTH TIPS

ಸೀತಾಂಗೋಳಿಯ ಗತವೈಭವ ಹಾಗೂ ಜ್ಞಾನ ದೀವಿಗೆ ಕೃತಿಗಳ ಬಿಡುಗಡೆ

             ಕುಂಬಳೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಸೀತಾಂಗೋಳಿ ಎಚ್.ಎ.ಎಲ್ ಸನಿಹದ ಅಲಯನ್ಸ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಸಮಾರಂಭದಲ್ಲಿ ್ಲ ಲೇಖಕರು, ನ್ಯಾಯವಾದಿ ಎಂ. ಎಸ್. ಥೋಮಸ್ ಡಿಸೋಜಾರವರ ‘ಸೀತಾಂಗೋಳಿಯ ಗತವೈಭವ' ಹಾಗೂ ಕೇರಳ ರಾಜ್ಯದ ಏಕೈಕ ಕನ್ನಡ ಕಲಿಕಾ ಮಾರ್ಗದರ್ಶಿ  ಕೆ. ರಾಮಚಂದ್ರ ಬಳ್ಳಾಲ್ ರಚಿಸಿದ 'ಜ್ಞಾನ ದೀವಿಗೆ' ಕೃತಿಯನ್ನು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಬಿಡುಗಡೆಗೊಳಿಸಿದರು.

               .  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.

            ಮಂಜುನಾಥ ಆಳ್ವ ಮಡ್ವ, ಸಾಂಸ್ಕೃತಿಕ ಸಂಘಟಕ ಪೃಥ್ವಿರಾಜ್ ಶೆಟ್ಟಿ ಕುಂಬ್ಳೆ,   ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಕುದುಕೋಳಿ ಹವ್ವಾಸನ್ ಫೌಂಡೇಶನ್ ಸಂಸ್ಥಾಪಕ ಅಬ್ದುಲ್ಲಾ ಮಾದುಮೂಲೆ ಉಪಸ್ಥಿತರಿದ್ದರು.  ಗೌರವ ಅತಿಥಿಗಳಾಗಿ ಹಿರಿಯ ಪತ್ರಕರ್ತ, ಸಾಹಿತಿ ಡಾ. ಸದಾನಂದ ಪೆರ್ಲ, ಶೋಕ ಮಾತಾ ದೇವಾಲಯ ಬೇಳ ಪ್ರಧಾನ ಧÀರ್ಮಗುರು ಅತೀ ವಂ. ಸ್ವಾಮಿ ಫಾದರ್ ಸ್ಟ್ಯಾನಿ ಪಿರೇರಾ, ಜಿಲ್ಲಾ ಯೋಜನಾಕಾರಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ಮುಕೇಶ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ರಾಜೇಶ್ ಜಿ., ಕ.ಸಾ.ಪ. ಕೇರಳ ಘಟಕ ಅಧ್ಯಕ್ಷ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಸಾಮಾಜಿಕ ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ್ ಶೆಟ್ಟಿ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಜಮೀಲಾ ಸಿದ್ದೀಕ್ ದಂಡೆಗೋಳಿ, ಕೆ.ಯು.ಡಬ್ಲ್ಯೂ ಜೆ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜೆ.ಸಿ ಲೋಕೇಶ್, ಬೆಂಗಳೂರು ಕೆ. ಯು. ಡಬ್ಲ್ಯೂ ಕೋಶಾಧಿಕಾರಿ ವಾಸುದೇವ ಹೊಳ್ಳ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸುಕುಮಾರ ಕುದ್ರೆಪಾಡಿ, ಬದಿಯಡ್ಕ ಗ್ರಾಮ  ಪಂಚಾಯಿತಿ ಸದಸ್ಯ ಶಂಕರ ಡಿ., ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ ಉಪಸ್ಥಿತರಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries