ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲೆಯಲ್ಲಿ ವಾಚನ ಮಾಸಾಚರಣೆಯ ಸಮಾರೋಪ ಸಮಾರಂಭ ಜರುಗಿತು. ನಿವೃತ್ತ ಶಿಕ್ಷಕ, ತರಬೇತುದಾರ ಕೃಷ್ಣೋಜಿ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯುಪಿ ವಿಭಾಗದ ಮಕ್ಕಳಿಗೆ ಕವಿತೆ ರಚನೆಗೆ ಮಾರ್ಗದರ್ಶನ ನೀಡಿದರು. ಮಕ್ಕಳು ತಯಾರಿಸಿದ "ಓದಿನ ಟಿಪ್ಪಣಿ" ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಓದು ನಮ್ಮ ಬೌದ್ಧಿಕ ಸಂಪತ್ತನ್ನು ಹೆಚ್ಚಿಸುತ್ತದೆ. ಹೆಚ್ಚಾಗಿ ಓದುವುದರಿಂದ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಶಿಕ್ಷಕ ಸಚ್ಚಿದಾನಂದ ಎಸ್. ಕನ್ನಡ ಭಾಷೆ, ಸಾಹಿತ್ಯದ ಮಹತ್ವ ತಿಳಿಸಿದರು. ಮಕ್ಕಳ ಸೃಜನಶೀಲ ಚಟುವಟಿಕೆಯನ್ನು ಪ್ರದರ್ಶಿಸುವ ಬಾಲೋದ್ಯಾನಕ್ಕೆ ಅತಿ ಹೆಚ್ಚು ಕೃತಿಗಳನ್ನು ನೀಡಿದ ಅರಳು ಪ್ರತಿಭೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಚಾಂದ್ರ ದಿನದ ಪ್ರಯುಕ್ತ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಪ್ರಭಾರ ಮುಖ್ಯ ಶಿಕ್ಷಕ ವೆಂಕಟ ವಿದ್ಯಾಸಾಗರ್ ಸ್ವಾಗತಿಸಿದರು. ಯಶಿತ ಪಿ.ಜಿ. ಮತ್ತು ರೇಷ್ಮಾ ಬಿ. ಕಾರ್ಯಕ್ರಮ ನಿರೂಪಿಸಿದರು.ಸಂಸ್ಕೃತ ಶಿಕ್ಷಕ ಶ್ರೀಹರಿಶಂಕರ ಶರ್ಮ ವಂದಿಸಿದರು.





