ನವದೆಹಲಿ: ಲಿಂಗ ಪರಿವರ್ತನೆ ಮಾಡಿಕೊಂಡ ಐಆರ್‌ಎಸ್ ಅಧಿಕಾರಿಗೆ ಅಧಿಕೃತ ದಾಖಲೆಗಳಲ್ಲಿ ಹೆಸರು ಹಾಗೂ ಲಿಂಗ ಬದಲಾವಣೆಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
0
samarasasudhi
ಜುಲೈ 10, 2024
ನವದೆಹಲಿ: ಲಿಂಗ ಪರಿವರ್ತನೆ ಮಾಡಿಕೊಂಡ ಐಆರ್‌ಎಸ್ ಅಧಿಕಾರಿಗೆ ಅಧಿಕೃತ ದಾಖಲೆಗಳಲ್ಲಿ ಹೆಸರು ಹಾಗೂ ಲಿಂಗ ಬದಲಾವಣೆಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
ಹಣಕಾಸು ಇಲಾಖೆಯಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಇದೇ ಮೊದಲು ಎನ್ನಲಾಗಿದ್ದು ಐತಿಹಾಸಿಕ ಎಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಸುಂಕ ಮತ್ತು ನೇರ ತೆರಿಗೆ ಇಲಾಖೆಯ ಹೈದರಾಬಾದ್ ಪ್ರಾದೇಶಿಕ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂ. ಅನಸೂಯಾ ಎನ್ನುವ ಮೂಲ ಹೆಸರಿನ ಅಧಿಕಾರಿ ಎಂ. ಅನುಕದೀರ್ ಸೂರ್ಯ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.
'ಲಿಂಗ -ಮಹಿಳೆ' ಎನ್ನುವುದನ್ನು ಪುರುಷ ಎಂದು ಬದಲಿಸಲಾಗಿದೆ.
ಇನ್ಮುಂದೆ ಅವರ ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು, ಲಿಂಗ, ಬದಲಾವಣೆ ಅನುಸಾರ ಇರಲಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂರ್ಯ ಅವರು ತಮಿಳುನಾಡು ಮೂಲದವರಾಗಿದ್ದು ಮದ್ರಾಸ್ ಐಐಟಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದಿದ್ದಾರೆ, ಐಆರ್‌ಎಸ್ ತೇರ್ಗಡೆ ಹೊಂದಿ, ಈ ಮೊದಲು ಚೆನ್ನೈನಲ್ಲಿ ವೃತ್ತಿ ಆರಂಭಿಸಿದ್ದರು. ಬಡ್ತಿ ನಂತರ ಹೈದರಾಬಾದ್‌ನಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.