ನವದೆಹಲಿ: 'ಕೆನಡಾದಲ್ಲಿ ಇದ್ದುಕೊಂಡು ಭಾರತ ವಿರೋಧಿ ಕೃತ್ಯ ನಡೆಸುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು' ಎಂದು ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯಿಸಿದೆ.
0
samarasasudhi
ಜುಲೈ 26, 2024
ನವದೆಹಲಿ: 'ಕೆನಡಾದಲ್ಲಿ ಇದ್ದುಕೊಂಡು ಭಾರತ ವಿರೋಧಿ ಕೃತ್ಯ ನಡೆಸುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು' ಎಂದು ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊರಿಗೆ ಕೊಲೆ ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಕೆನಡಾ ಕ್ರಮಕೈಗೊಂಡಿದೆ ಎಂಬ ವರದಿಗೆ ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದೆ.
'ಭಾರತದ ನಾಯಕರು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿ ಕೊಲೆ ಬೆದರಿಕೆ ಹಾಕುವವರ ವಿರುದ್ಧವೂ ಇಂತಹ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
'ಭಾರತದ ನಾಯಕರು, ಸಂಸ್ಥೆಗಳು,ವಿಮಾನ ಸಂಸ್ಥೆಗಳು, ರಾಜತಾಂತ್ರಿಕರ ವಿರುದ್ಧ ಬೆದರಿಕೆ ಬಂದಾಗಲೂ ಇಂತಹುದೇ ಕ್ರಮ ಅಗತ್ಯ.ಕಠಿಣ ಕ್ರಮ ಜರುಗಿಸುವುದನ್ನು ನಾವು ನಿರೀಕ್ಷಿಸುತ್ತೇವೆ' ಎಂದು ಜೈಸ್ವಾಲ್ ಅವರು ಹೇಳಿದರು.