ಪೆರ್ಲ: ನಾಲಂದ ಕಾಲೇಜು ಅರ್ಥ ಶಾಸ್ತ್ರ ವಿಭಾಗ ಹಾಗೂ ಎನ್ನೆಸ್ಸೆಸ್ ಘಟಕ ಸಂಖ್ಯೆ 49 ಜಂಟಿ ಆಶ್ರಯದಲ್ಲಿ ಗುರುವಾರ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು. ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜನಸಂಖ್ಯಾ ಸ್ಫೋಟದ ಸಾದಕ ಬಾಧಕಗಳ ಕುರಿತು ಅರಿವು ಮೂಡಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಅನುಪಮ ಟಿ.ಸ್ವಾಗತಿಸಿ. ಪ್ರಾಧ್ಯಾಪಕಿ ಅಶಾಲತ ವಂದಿಸಿದರು.




.jpg)
