ಕುಂಬಳೆ: ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ರಸ್ತೆಬದಿಗಳಲ್ಲಿ ಕತ್ತಲ ಮರೆಯಲ್ಲಿ ತ್ಯಾಜ್ಯಗಳನ್ನು ಎಸೆದು ಸಾರ್ವಜನಿಕ ಸವಾಲುಗಳಿಗೆ ಕಾರಣವಾಗುತ್ತಿದ್ದು, ಇದರ ವಿರುದ್ದ ಕಾನೂನು ಕ್ರಮ ಜರುಗಿಸಲು ಎನ್‍ಎಸ್‍ಪಿಐ (ಭಾರತೀಯ ರಾಷ್ಟ್ರೀಯ ಜಾತ್ಯತೀತ ಪಕ್ಷ) ಸಿದ್ಧತೆ ನಡೆಸಿದೆ.
ಎನ್‍ಎಸ್‍ಪಿಐ ಸ್ವಚ್ಛ ಮತ್ತು ನೈರ್ಮಲ್ಯ ಸುಂದರ ಕೇರಳವನ್ನು ಉತ್ತೇಜಿಸುತ್ತದೆ. ಇದು ಸಂಘಟನೆಯ ಮೊದಲ ಚಟುವಟಿಕೆಯಾಗಿದೆ ಎಂದು ರಾಜ್ಯಾಧ್ಯಕ್ಷ ಕೆ.ಪಿ.ಮುನೀರ್ ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಒಂದು ತಿಂಗಳೊಳಗೆ ಕಸದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ರಬಲ ಸಾರ್ವಜನಿಕ ಮುಷ್ಕರ ಹಮ್ಮಿಕೊಂಡು ನ್ಯಾಯಾಲಯದ ಮೊರೆ ಹೋಗಲಾಗುವುದು. ಅಜಾಗರೂಕತೆಯಿಂದ ಕಸದ ರಾಶಿ ಹಾಕುವುದರಿಂದ ಮಾರಣಾಂತಿಕ ರೋಗಗಳಾದ ಹಳದಿ ಕಾಮಲೆ, ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಹರಡುತ್ತಿದ್ದು, ಇದನ್ನು ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಎನ್ ಎಸ್ ಟಿಯು ರಾಜ್ಯಾಧ್ಯಕ್ಷ ಸಿ.ಎಂ.ಶೇಕುಂಞÂ್ಞ, ಸದಸ್ಯ ಮುಹಮ್ಮದ್ ಹಾಜಿ ವರ್ಕಾಡಿ, ವಲಯ ಅಧ್ಯಕ್ಷ ಕೆ.ನವಾಝ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರುದ್ದೀನ್ ಉಪಸ್ಥಿತರಿದ್ದರು.




.jpg)
