HEALTH TIPS

ಹನಿಟ್ರಾಪ್ ಮೂಲಕ ಯುವಕನ ನಗ, ನಗದು ದೋಚಿದ್ದ ಯುವತಿ ಸೆರೆ

                  ಕಾಸರಗೋಡು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಮಾಡಿಕೊಂಡು, ನಂತರ ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ಪೀಕಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರ್ ಎಂಬಾಕೆಯನ್ನು ಉಡುಪಿಯಿಂದ ಪೊಲೀಸರು ಬಂಧಿಸಿದ್ದಾರೆ.

            ಉಡುಪಿಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಅಲ್ಲಿನ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿಈಕೆ ವಾಸಿಸುತ್ತಿದ್ದ ವಸತಿಗೃಹದಿಂದ ಸೆರೆಹಿಡಿಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ ಪೊಯಿನಾಚಿಯ ೩೦ರ ಹರೆಯದ ಯುವಕನನ್ನು ನಂತರ ಹನಿಟ್ರಾಪ್‌ನಲ್ಲಿ ಸಿಲುಕಿಸಿ ಆತನಿಂದ ಒಂದು ಲಕ್ಷ ರೂ. ನಗದು ಹಾಗೂ ಒಂದು ಪವನು ಚಿನ್ನದ ಸರ ಎಗರಿಸಿರುವ ಬಗ್ಗೆ ಯುವಕ ಮೇಲ್ಪರಂಬ ಠಾಣೆಯಲ್ಲಿ ದೂರು ದಾಖಲಿಸಿದ್ದನು. ನಂತರ ಶ್ಸರುತಿ ತಲೆಮರೆಸಿಕೊಂಡಿದ್ದಳು. ಈಕೆ ವಿರುದ್ಧ ಕಣ್ಣೂರು ಹಾಗೂ ಕೊಯಿಲಾಂಡಿ ಠಾಣೆಗಳಲ್ಲೂ ಕೇಸುಗಳಿರುವುದಾಘಿ ಪೊಲೀಸರು ತಿಳಿಸಿದ್ದಾರೆ.


       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries