HEALTH TIPS

ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ನೂತನ ಸದಸ್ಯರು: ಸಹಕಾರ ಭಾರತಿಯ ಎಲ್ಲ 11 ಮಂದಿ ಅವಿರೋಧ ಆಯ್ಕೆ

              ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ನೂತನ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ಎಲ್ಲಾ 11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

           2024-29ರ ವರೆಗೆ ಅಧ್ಯಕ್ಷರಾಗಿ ಗಣಪತಿ ಪ್ರಸಾದ ಕುಳಮರ್ವ, ಉಪಾಧ್ಯಕ್ಷರಾಗಿ ಅವಿನಾಶ್ ರೈ ಬದಿಯಡ್ಕ ಆಯ್ಕೆಯಾದರು. ವಿ.ಶ್ರೀಕೃಷ್ಣ ಭÀಟ್, ರಾಮಪ್ಪ ಮಂಜೇಶ್ವರ, ಶ್ಯಾಂಭಟ್ ಮಲ್ಲಡ್ಕ, ಸುಬ್ರಹ್ಮಣ್ಯ ಏನಂಕೂಡ್ಲು, ಅಜೇಯ ಖಂಡಿಗೆ, ರವಿ ನೀರ್ಚಾಲು, ವಿದ್ಯಾಶಂಕರಿ ವಾಶೆ, ರಮ್ಯಾ ದರ್ಭೆತ್ತಡ್ಕ, ಸ್ಮಿತಾ ರೈ ನೂತನ ಸದಸ್ಯರಾಗಿ ಆಯ್ಕೆಯಾದರು. 

         ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಹಕಾರ ಭಾರತಿಯ ನೇತೃತ್ವದಲ್ಲಿ ಅಭಿನಂದನಾ ಸಭೆ ಬ್ಯಾಂಕ್ ಸಭಾ ಭÀವನದಲ್ಲಿ ಮಂಗಳವಾರ ಜರಗಿತು. ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಅಭಿನಂದನಾ ಭಾಷಣ ಮಾಡಿದರು. ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ಸಹಕಾರಿ ಇಲಾಖೆಯ ಅಧಿಕಾರಿ ಮಣಿಕಂಠನ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ಬ್ಯಾಂಕ್ ಕಾರ್ಯದರ್ಶಿ ಅಜಿತ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries