HEALTH TIPS

ಮವ್ವಾರು ಶಾಲೆಯಲ್ಲಿ ಡಿಟರ್ಜಂಟ್ ಉತ್ಪಾದನೆ ಕಾರ್ಯಾಗಾರ

        ಮುಳ್ಳೇರಿಯ: ಉತ್ತಮ ಗುಣಮಟ್ಟದ ಡಿಟರ್ಜಂಟ್ ಕಡಿಮೆ ವೆಚ್ಚದಲ್ಲಿ ತಯಾರಿಸಿ ಮವ್ವಾರು ಶಾಲೆಯ ವಿದ್ಯಾರ್ಥಿಗಳು ಹಾಗೂ ಮಾತೃಸಮಿತಿ ಸದಸ್ಯರು ಗಮನಸೆಳೆದಿದ್ದಾರೆ. ಬಟ್ಟೆ, ಪಾತ್ರೆ, ನೆಲ ಒರೆಸಲು, ಟೋಯಿಲೆಟ್ ಕ್ಲೀನರ್, ಫಿನಾಯಿಲ್‍ಗಳನ್ನು ಶಾಲೆಯಲ್ಲೇ ತಯಾರಿಸಲಾಗಿದೆ. ಈ ಕಾರ್ಯಾಗಾರವನ್ನು ಕುಂಬ್ಡಾಜೆ ಗ್ರಾಮಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೊಳಿಗೆ ಉದ್ಘಾಟಿಸಿ ಮಾತನಾಡಿ ಪ್ರತೀ ಮಹಿಳೆಯರೂ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಶಾಲೆಯಲ್ಲಿ ಎಲ್ಲರೂ ಒಂದುಗೂಡಿ ಉತ್ತಮ ಕಾರ್ಯಕ್ಕೆ ತೊಡಗಿರುವುದು ಶ್ಲಾಘನೀಯ ಎಂದರು.

       ಗ್ರಾಮ ಪಂಚಾಯತಿ ಸದಸ್ಯೆ ಸುನಿತಾ ಜೆ.ರೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಜ ಪಿ.ವಿ., ಮಾತೃಸಮಿತಿ ಅಧ್ಯಕ್ಷೆ ಭೀಫಾತಿಮ್ಮ, ಸಿಡಿಎಸ್ ಚೇರ್‍ಪರ್ಸನ್ ರೋಶಿನಿ ಶುಭಾಶಂಸನೆಗೈದರು. ಸ್ವದೇಶೀ ಗ್ರೂಪ್ ಕಾರ್ಯದರ್ಶಿ ಸತ್ಯನಾರಾಯಣ ಮಾಸ್ತರ್ ಡಿಟರ್ಜಂಟ್ ಕಾರ್ಯಾಗಾರದ ನೇತೃತ್ವವನ್ನು ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries