HEALTH TIPS

ವಯನಾಡ್ ದುರಂತ: ಸಾವಿನ ಸಂಖ್ಯೆ 282 ಏರಿಕೆ: 191 ಮಂದಿ ನಾಪತ್ತೆ

                 ವಯನಾಡು ಜಿಲ್ಲೆಯ ಮುಂಡಕೈ ಮತ್ತು ಚುರಲ್ಮಲಾ ಪ್ರದೇಶಗಳು ಕೇರಳ ಕಂಡ ಅತಿದೊಡ್ಡ ಭೂಕುಸಿತ ದುರಂತವಾಗಿದೆ.

             ಮೂರನೇ ದಿನ ಬೆಳಿಗ್ಗೆ ಸಾವಿನ ಸಂಖ್ಯೆ 282 ಕ್ಕೆ ಏರಿಕೆಯಾಗಿದೆ. ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂಬ ವರದಿಗಳಿವೆ. ಇಂದಿನಿAದ ಸೇನೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಸೇನೆಯು ಇಂದು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲಿದೆ.

              ಏತನ್ಮಧ್ಯೆ, ಚಾಲಿಯಾರ್ ನದಿಯಲ್ಲಿ ಪತ್ತೆಯಾದ 100 ಕ್ಕೂ ಹೆಚ್ಚು ಮೃತ ದೇಹಗಳ ಮರಣೋತ್ತರ ಪರೀಕ್ಷೆಯು ನಿಲಂಬೂರಿನಲ್ಲಿ ಪೂರ್ಣಗೊಂಡಿದೆ. ಉಳಿದ ಶವಗಳ ಪತ್ತೆಗೆ ಕೆ9 ಸ್ಕ್ವಾಡ್ ಅನ್ನು ನಿಯೋಜಿಸಲಾಗಿದೆ. ಇದೇ ವೇಳೆ, ರಕ್ಷಣಾ ಕಾರ್ಯಾಚರಣೆ ನಸುಕಿನಿಂದಲೇ ಮತ್ತೆ ಪ್ರಾರಂಭವಾಯಿತು. ಸ್ನಿಫರ್ ಶ್ವಾನಗಳೂ ಹುಡುಕಾಟಕ್ಕೆ ಮುಂದಾಗಿವೆ. ಧ್ವಂಸಗೊAಡ ಮನೆಗಳ ನಡುವೆ ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ.

             ಅವರನ್ನು ಹುಡುಕುವುದು ಮೊದಲ ಆದ್ಯತೆಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಯಂತ್ರಗಳನ್ನು ವ್ಯವಸ್ಥೆಗೊಳಿಸಲಾಗುವುದು. . ಇದುವರೆಗೆ 137 ಮೃತ ದೇಹಗಳನ್ನು ನಿಲಂಬೂರ್ ಜಿಲ್ಲಾಸ್ಪತ್ರೆಗೆ ತರಲಾಗಿದೆ. 54 ಮೃತ ದೇಹಗಳು ಮತ್ತು 83 ದೇಹದ ಭಾಗಗಳು ಮಾತ್ರ ಲಭಿಸಿವೆ.

             31 ಮೃತ ದೇಹಗಳು ಮತ್ತು 41 ದೇಹದ ಭಾಗಗಳನ್ನು ವಯನಾಡಿಗೆ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಡಕೈಯಲ್ಲಿ 195 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, ಸಾವಿನ ಸಂಖ್ಯೆ ಈವರೆಗೆ 282 ಆಗಿದೆ. 191 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 82 ಶಿಬಿರಗಳಲ್ಲಿ 8000ಕ್ಕೂ ಹೆಚ್ಚು ಜನರು ತಂಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries