ಹಜರೀಬಾಗ್ : ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಹೊಸ ಪಕ್ಷ 'ಅಟಲ್ ವಿಚಾರ್ ಮೋರ್ಚಾ'ವನ್ನು ಘೋಷಿಸುವ ಸಾಧ್ಯತೆ ಇದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
0
samarasasudhi
ಆಗಸ್ಟ್ 27, 2024
ಹಜರೀಬಾಗ್ : ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಹೊಸ ಪಕ್ಷ 'ಅಟಲ್ ವಿಚಾರ್ ಮೋರ್ಚಾ'ವನ್ನು ಘೋಷಿಸುವ ಸಾಧ್ಯತೆ ಇದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ತಮ್ಮ ಬೆಂಬಲಿಗರೊಂದಿಗೆ ಇಲ್ಲಿ ಭಾನುವಾರ ಸಭೆ ನಡೆಸಿದ್ದ ಅವರು, ಹೊಸ ಪಕ್ಷ ಕಟ್ಟುವ ವಿಚಾರವನ್ನು ಸಭೆಯ ಮುಂದಿಟ್ಟಿದ್ದರು.
ಜಾರ್ಖಂಡ್‌ನಿಂದ ದೆಹಲಿಗೆ ಸೋಮವಾರ ತೆರಳುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಿನ್ಹಾ, 'ಇನ್ನಷ್ಟು ಚರ್ಚೆಯ ಬಳಿಕ ಹೊಸ ಪಕ್ಷ ರೂಪಿಸುವ ಕುರಿತು ನಿರ್ಧಾರ ಪ್ರಕಟಿಸಲಾಗುವುದು. ವಾಜಪೇಯಿ ಅವರ ತತ್ವ ಸಿದ್ಧಾಂತಗಳ ಮೇಲೆ ಪಕ್ಷವು ಕಾರ್ಯನಿರ್ವಹಿಸಲಿದೆ' ಎಂದರು.
ಬಿಜೆಪಿ ಕಾರ್ಯಕಾರಿಣಿಯ ಮಾಜಿ ಸದಸ್ಯ ಸುರೇಂದ್ರ ಕುಮಾರ್ ಸಿನ್ಹಾ, ಬಿಜೆಪಿಯ ಮಾಜಿ ಸಂಸದ ಜಯಂತ್ ಸಿನ್ಹಾ ಅವರ ಪ್ರತಿನಿಧಿಯೊಬ್ಬರು ಸಭೆಯ ನೇತೃತ್ವ ವಹಿಸಿದ್ದರು. 1998, 1999 ಹಾಗೂ 2009ರಲ್ಲಿ ಹಜರೀಬಾಗ್ ಲೋಕಸಭಾ ಕ್ಷೇತ್ರದಿಂದ ಸಿನ್ಹಾ ಅವರು ಆಯ್ಕೆಯಾಗಿದ್ದರು. 2004ರಲ್ಲಿ ಸಿಪಿಐ ಅಭ್ಯರ್ಥಿ ಎದುರು ಸೋತಿದ್ದರು.