ನವದೆಹಲಿ: ನೈರುತ್ಯ ದೆಹಲಿಯ ಸತ್ಯ ನಿಕೇತನ ಪ್ರದೇಶದ ಕೆಫೆಯೊಂದರಲ್ಲಿ ಕುಳಿತುಕೊಳ್ಳುವ ಆಸನಗಳ ವಿಚಾರವಾಗಿ ಮಾಲೀಕರೊಂದಿಗೆ ವಾಗ್ವಾದ ನಡೆಸಿ, ಗುಂಡಿನ ದಾಳಿ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 26, 2024
ನವದೆಹಲಿ: ನೈರುತ್ಯ ದೆಹಲಿಯ ಸತ್ಯ ನಿಕೇತನ ಪ್ರದೇಶದ ಕೆಫೆಯೊಂದರಲ್ಲಿ ಕುಳಿತುಕೊಳ್ಳುವ ಆಸನಗಳ ವಿಚಾರವಾಗಿ ಮಾಲೀಕರೊಂದಿಗೆ ವಾಗ್ವಾದ ನಡೆಸಿ, ಗುಂಡಿನ ದಾಳಿ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಅಹಮದ್ (26), ಔರಂಗಜೇಬ್ (26), ಅತುಲ್ (20), ಜಾವೇದ್ (23) ಮತ್ತು ಆದಿಲ್ (19) ಎಂದು ಗುರುತಿಸಲಾಗಿದೆ.
ರಾತ್ರಿ 8.30 ರ ಸುಮಾರಿಗೆ ಕೆಫೆಗೆ ಬಂದಿದ್ದ ಆರೋಪಿಗಳು ಕುಳಿತುಕೊಳ್ಳುವ ಕುರ್ಚಿ ವಿಚಾರಕ್ಕೆ ಸಿಬ್ಬಂದಿ ಮತ್ತು ಮಾಲೀಕ ರೋಹಿತ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಬಳಿಕ ಕೆಫೆಯ ಹೊರಗೆ ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಟ್ಟುಹಬ್ಬ ಆಚರಿಸುವ ಸಲುವಾಗಿ ಆರೋಪಿಗಳು ಕೆಫೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.